ಶಿವಮೊಗ್ಗ : ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಓರ್ವ ಸಾವು - undefined
ಮಾಳೂರು ಠಾಣಾ ವ್ಯಾಪ್ತಿಯ ಮಂಡಗದ್ದೆಯ ಬಳಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
![ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಓರ್ವ ಸಾವು](https://etvbharatimages.akamaized.net/etvbharat/prod-images/768-512-3839845-thumbnail-3x2-accident.jpg)
ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಓರ್ವ ಸಾವು
ಮಾಳೂರು ಠಾಣಾ ವ್ಯಾಪ್ತಿಯ ಮಂಡಗದ್ದೆಯ ಬಳಿ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆ ಚಲಿಸುತ್ತಿದ್ದ ಬಸ್ಗೆ ಎದುರುಗಡೆಯಿಂದ ಬಂದ ಬಜಾಜ್ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಉಸ್ಮಾನ್ (19) ಸ್ಥಳದಲ್ಲಿಯೇ ಅಸುನೀಗಿದ್ದಾನೆ.
ಈ ಕುರಿತು ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.