ಶಿವಮೊಗ್ಗ: ಬಸ್ಗೆ ಡಿಕ್ಕಿ ಹೊಡೆದ ಕಾರು ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ಹೊಸನಗರದ ಬಟ್ಟೆ ಮಲ್ಲಪ್ಪ ಬಳಿ ನಡೆದಿದೆ.
ಹೊನ್ನಾವರದಿಂದ ನಗರದ ದರ್ಗಾಕ್ಕೆ ಬರುತ್ತಿದ್ದ ಕಾರು ಬಟ್ಟೆಮಲ್ಲಪ್ಪ ಬಳಿ ಹರಿದ್ರಾವತಿ ನದಿಯ ಮುಡುಬ ಸೇತುವೆ ಮೇಲೆ ಬರುವಾಗ ದುರ್ಗಾಂಬ ಬಸ್ಗೆ ಡಿಕ್ಕಿ ಹೊಡೆದಿದೆ. ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸೇತುವೆಯಿಂದ ಸುಮಾರು 30 ಅಡಿ ಮೇಲಿಂದ ನದಿಗೆ ಬಿದ್ದಿದೆ.