ಶಿವಮೊಗ್ಗ: ಪಾದಚಾರಿ ಮೇಲೆ ಏಕಾಏಕಿ ಗೂಳಿ ದಾಳಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಛತ್ರಿ ಹಿಡಿದು ಪುಟ್ ಪಾತ್ ಮೇಲೆ ನಿಂತಿದ್ದ ವೇಳೆ, ಅಲ್ಲಿಗೆ ಬಂದ ಗೂಳಿಯೊಂದು ಏಕಾ ಏಕಿ ದಾಳಿ ಮಾಡಿದೆ. ಇದರಿಂದ ಪಾದಚಾರಿ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದು, ಅಲ್ಲೇ ಪಕ್ಕದಲ್ಲಿದ್ದ ಜನರು ತಕ್ಷಣ ಆ ವ್ಯಕ್ತಿಯ ಬಳಿಗೆ ಧಾವಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತೀರ್ಥಹಳ್ಳಿ: ಪಾದಚಾರಿಗೆ ಏಕಾಏಕಿ ಗುಮ್ಮಿದ ಗೂಳಿ...! ವಿಡಿಯೋ ನೋಡಿ!! - ಈಟಿವಿ ಭಾರತ ಕನ್ನಡ
ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಗೂಳಿಯೊಂದು ಗುದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತೀರ್ಥಹಳ್ಳಿ: ಪಾದಚಾರಿಗೆ ಏಕಾಏಕಿ ಗುಮ್ಮಿದ ಗೂಳಿ...!
ತೀರ್ಥಹಳ್ಳಿ ಪಟ್ಟಣ ಪಂಚಾಯತ್ಗೆ ಗೂಳಿಯನ್ನು ಸ್ಥಳಾಂತರ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯನ್ನು ನೋಡಿಯಾದರೂ ಗೂಳಿಗಳನ್ನು ತೀರ್ಥಹಳ್ಳಿ ಪಟ್ಟಣದಿಂದ ಹೊರಗೆ ಸ್ಥಳಾಂತರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮನೆಯಂಗಳದಲ್ಲಿ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ: ತಪ್ಪಿದ ಬೇಟೆ
Last Updated : Dec 3, 2022, 9:38 PM IST