ಕರ್ನಾಟಕ

karnataka

ETV Bharat / state

ಶರಾವತಿ ಹಿನ್ನೀರು ಪ್ರದೇಶಗಳಿಗೆ ಲಾಂಚ್ ಸೌಲಭ್ಯ ಕಲ್ಪಿಸಿ ಬಿಎಸ್​​ವೈ ಹುಟ್ಟುಹಬ್ಬ ಆಚರಣೆ - ಕೋಗಾರು-ಶಿಗ್ಗಲು ಗ್ರಾಮ

ಸಾಗರ ತಾಲೂಕಿನ ಶರಾವತಿ ಹಿನ್ನೀರಿ‌ನ ಎಣ್ಣೆಹೊಳೆಗೆ ನೂತನ ಲಾಂಚ್ ಅನ್ನು ಶಾಸಕ ಹಾಲಪ್ಪ ಉದ್ಘಾಟಿಸಿದರು.‌ ಶರಾವತಿ ಹಿನ್ನೀರಿನ ಪ್ರದೇಶಗಳಾದ ಕೋಗಾರು-ಶಿಗ್ಗಲು ಗ್ರಾಮದ ಜನ ಸಮೀಪದ ಎಣ್ಣೆಹೊಳೆ ಗ್ರಾಮಕ್ಕೆ ಹೋಗಲು ಹಿನ್ನೀರಿನಲ್ಲಿ ಸಾಗಲು ಲಾಂಚ್ ವ್ಯವಸ್ಥೆ ಇಲ್ಲದೆ, ಸುಮಾರು 40 ಕಿಮೀ ದೂರವನ್ನು ಬ್ಯಾಕೋಡು ಮೂಲಕ ಸಾಗಬೇಕಿತ್ತು.

Facilities in Sharavathi Backwaters
ಶರಾವತಿ ಹಿನ್ನೀರು ಪ್ರದೇಶಗಳಿಗೆ ಲಾಂಚ್

By

Published : Feb 27, 2021, 7:17 PM IST

ಶಿವಮೊಗ್ಗ: ಶರಾವತಿ ಹಿನ್ನೀರಿನ ಪ್ರದೇಶ ಲಾಂಚ್​​​ಗೆ ಚಾಲನೆ ನೀಡಿ ಸಿಎಂ ಯಡಿಯೂರಪ್ಪನವರ ಜನ್ಮ ದಿನವನ್ನು ಶಾಸಕ ಹರತಾಳು ಹಾಲಪ್ಪ ಆಚರಿಸಿದರು.

ಶರಾವತಿ ಹಿನ್ನೀರು ಪ್ರದೇಶಗಳಿಗೆ ಲಾಂಚ್

ಓದಿ: ಫೆ. 28 ಮತ್ತು ಮಾರ್ಚ್ 1ರಂದು ಶಿವಮೊಗ್ಗ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್​ವೈ

ಸಾಗರ ತಾಲೂಕಿನ ಶರಾವತಿ ಹಿನ್ನೀರಿ‌ನ ಎಣ್ಣೆಹೊಳೆಗೆ ನೂತನ ಲಾಂಚ್ ಅನ್ನು ಶಾಸಕ ಹಾಲಪ್ಪ ಉದ್ಘಾಟಿಸಿದರು.‌ ಶರಾವತಿ ಹಿನ್ನೀರಿನ ಪ್ರದೇಶಗಳಾದ ಕೋಗಾರು-ಶಿಗ್ಗಲು ಗ್ರಾಮದ ಜನ ಸಮೀಪದ ಎಣ್ಣೆಹೊಳೆ ಗ್ರಾಮಕ್ಕೆ ಹೋಗಲು ಹಿನ್ನೀರಿನಲ್ಲಿ ಸಾಗಲು ಲಾಂಚ್ ವ್ಯವಸ್ಥೆ ಇಲ್ಲದೆ, ಸುಮಾರು 40 ಕಿಮೀ ದೂರವನ್ನು ಬ್ಯಾಕೋಡು ಮೂಲಕ ಸಾಗಬೇಕಿತ್ತು. ಎಣ್ಣೆಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಶಿಗ್ಗಲು- ಕೋಗಾರು ಗ್ರಾಮದವರು ಪರದಾಡುವಂತಾಗಿತ್ತು.

ಸಣ್ಣ ದೋಣಿಯ ಮೂಲಕ ಸಾಗುವ ಮಾರ್ಗದಲ್ಲಿ ಸಾವು-ನೋವುಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರು ಸರಿಯಾದ ರಸ್ತೆ ಸೌಲಭ್ಯವಿಲ್ಲದೆ, ವಾಹನ ಸೌಕರ್ಯವಿಲ್ಲದೆ ಪರದಾಡುತ್ತಿದ್ದರು.

ಬ್ಯಾಕೋಡಿಗೆ ಬರಲು ಸುಮಾರು 5 ಕಿಮೀ ದೂರ ನಡೆದು ಸಾಗಬೇಕಿತ್ತು. ತಮ್ಮ ಗ್ರಾಮಕ್ಕೆ ಸೌಲಭ್ಯ‌ ನೀಡಿ ಎಂದು ಚುನಾವಣೆಗಳನ್ನು ಸಹ ಬಹಿಷ್ಕಾರ ಮಾಡಿದ್ದರು. ಇಂತಹ ಕುಗ್ರಾಮಗಳಿಗೆ ಲಾಂಚ್ ವ್ಯವಸ್ಥೆ ಮಾಡಿದ್ದು, ಈ ಭಾಗದ ಜನತೆಗೆ ಹರ್ಷ ತಂದಿದೆ.

ABOUT THE AUTHOR

...view details