ಕರ್ನಾಟಕ

karnataka

ETV Bharat / state

ಶಿವಮೊಗ್ಗ: ವಿದ್ಯುತ್ ತಂತಿ ತುಳಿದು ಇಬ್ಬರು ಸಹೋದರರು ಸಾವು - shivamogga death case,

ಹೊಲದಲ್ಲಿ ವಿದ್ಯುತ್ ಪ್ರವಹಿಸಿ ಅಣ್ಣ-ತಮ್ಮಂದಿರ ಮಕ್ಕಳಾದ ಶೇಖರ್ ನಾಯ್ಕ(35) ಹಾಗೂ ಕುಮಾರಸ್ವಾಮಿ ನಾಯ್ಕ(35) ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

brothers died by current shock
ವಿದ್ಯುತ್ ತಂತಿ ತುಳಿದು ಸಹೋದರರಿಬ್ಬರ ಸಾವು

By

Published : Jun 17, 2021, 7:04 PM IST

ಶಿವಮೊಗ್ಗ: ಕೊಳವೆ ಬಾವಿಯ ಮೋಟಾರ್ ಆನ್ ಮಾಡಲು ಹೋಗಿದ್ದ ಸಹೋದರರಿಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಹಾರೋಗೊಪ್ಪ ಬಿ ಕ್ಯಾಂಪ್​​​ನಲ್ಲಿ ನಡೆದಿದೆ. ಶೇಖರ್ ನಾಯ್ಕ(35) ಹಾಗೂ ಕುಮಾರಸ್ವಾಮಿ ನಾಯ್ಕ(35) ಮೃತರು.

ವಿದ್ಯುತ್ ತಂತಿ ತುಳಿದು ಸಹೋದರರಿಬ್ಬರ ಸಾವು!

ಇವರಿಬ್ಬರು ತಮ್ಮ ಹೊಲ ಸರ್ವೆ ನಂಬರ್ 52/12ರಲ್ಲಿ ಕೊಳವೆಬಾವಿಯ ಸ್ವಿಚ್ ಆನ್ ಮಾಡಲು ಹೋಗಿದ್ದಾರೆ. ಗಾಳಿ ಮಳೆಗೆ ಸ್ವಿಚ್ ಬೋರ್ಡ್ ನೆಲಕ್ಕೆ ಬಿದ್ದಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರಿಬ್ಬರು ಅಣ್ಣ-ತಮ್ಮಂದಿರ ಮಕ್ಕಳೆಂದು ತಿಳಿದುಬಂದಿದೆ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೊಡಗು: ಮದ್ಯದ ಅಮಲಿನಲ್ಲಿ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡ ಭೂಪ!

ABOUT THE AUTHOR

...view details