ಕರ್ನಾಟಕ

karnataka

ETV Bharat / state

ಮಗು ವಿದೇಶದಲ್ಲಿ ಹುಟ್ಟಿದ್ರೂ ತಾಯ್ನಾಡು ಮರೆಯದ ದಂಪತಿ: ಹುಟ್ಟೂರಿಗೆ ಬಂದೇ ನಾಮಕರಣ ಶಾಸ್ತ್ರ - Britain citizen naming ceremony in India

ಲಂಡನ್​ನಲ್ಲಿ ನೆಲೆಸಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ (Bhadravathi) ಮೂಲದ ದಂಪತಿ ವಿದೇಶದಲ್ಲಿಯೇ ಜನಿಸಿದ ತಮ್ಮ ಮಗಳಿಗೆ ಭಾರತಕ್ಕೆ ಬಂದು ನಾಮಕರಣ ಶಾಸ್ತ್ರ (Naming ceremony)ಮಾಡಿ ಲಿಂಗಧಾರಣೆ ಮಾಡಿಸಿದ್ದಾರೆ.

Britain citizen naming ceremony done in bhadravathi
ಬ್ರಿಟನ್​ನಲ್ಲಿ ಜನಿಸಿದ ಮಗುವಿಗೆ ಭದ್ರಾವತಿಯಲ್ಲಿ ನಾಮಕರಣ

By

Published : Nov 15, 2021, 3:13 PM IST

ಶಿವಮೊಗ್ಗ: ಬ್ರಿಟನ್ ಪ್ರಜೆಗೆ (Britain citizen) ಭದ್ರಾವತಿಯಲ್ಲಿ ನಾಮಕರಣ ಶಾಸ್ತ್ರ (Naming ceremony) ಹಾಗು ಲಿಂಗಧಾರಣೆ ನಡೆಯಿತು.

ಬ್ರಿಟನ್​ನಲ್ಲಿ ಜನಿಸಿದ ಮಗುವಿಗೆ ಭದ್ರಾವತಿಯಲ್ಲಿ ನಾಮಕರಣ

ವಿವರ:

ಭದ್ರಾವತಿ ಮೂಲದ ಪುನೀತ್ ಹಾಗೂ ರಾಧಿಕಾ ದಂಪತಿ ಲಂಡನ್​​ನಲ್ಲಿ ನೆಲೆಸಿದ್ದಾರೆ. ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲಂಡನ್​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಕಳೆದ ಆರು ತಿಂಗಳ ಹಿಂದೆ ಲಂಡನ್​​ನಲ್ಲಿಯೇ ಹೆಣ್ಣು ಮಗು ಜನಿಸಿದೆ. ಇದೀಗ ಮಗುವಿನ ನಾಮಕರಣ ಭದ್ರಾವತಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಸಲಾಯಿತು.

ಬಸವ ಮರುಳಸಿದ್ದ ಸ್ವಾಮೀಜಿಯವರ ನೇತೃತ್ವದಲ್ಲಿ ಮಗುವಿಗೆ ನಾಮಕರಣ

ಮಗುವಿಗೆ ಲಿಂಗಾಯತ ಧರ್ಮದಂತೆ ಲಿಂಗಧಾರಣೆ ನಡೆಯಿತು. ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ (Basava Marulasidda Swamiji) ಲಿಂಗಧಾರಣೆ ಮಾಡಿ ಮಗುವಿಗೆ 'ನಿಧಿ' ಎಂದು ಹೆಸರಿಟ್ಟರು.

ಪುನೀತ್ ದಂಪತಿ ವಿದೇಶಕ್ಕೆ ಹೋಗಿದ್ದರೂ ಕೂಡಾ ಭಾರತೀಯ ಸಂಸ್ಕೃತಿಯಂತೆ ಮಗುವಿಗೆ ಇಲ್ಲಿಯೇ ನಾಮಕರಣ ಮಾಡಿದ್ದು, ಬ್ರಿಟನ್ ಪ್ರಜೆ ಭಾರತಕ್ಕೆ ಬಂದು‌ 'ನಿಧಿ'ಯಾಗಿದ್ದಾಳೆ.

ಇದನ್ನೂ ಓದಿ:RRRಗೆ ಹೆದರಿ ಚಿತ್ರ ಮುಂದಕ್ಕೆ ತಳ್ಳಿದ ಗಂಗೂಬಾಯಿ

ABOUT THE AUTHOR

...view details