ಕರ್ನಾಟಕ

karnataka

ಶಿವಮೊಗ್ಗ: ಭೀತಿ ಸೃಷ್ಟಿಸಿದ ಬಾಕ್ಸ್‌ ತೆರೆದ ಬಾಂಬ್ ನಿಷ್ಕೃಿಯ ದಳ, ಆತಂಕ ದೂರ

By ETV Bharat Karnataka Team

Published : Nov 6, 2023, 8:14 AM IST

Updated : Nov 6, 2023, 12:26 PM IST

ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ ರಾತ್ರಿ ಸುಮಾರು 8 ಗಂಟೆಯಿಂದ ಬೆಳಿಗ್ಗೆ ಜಾವ 5 ಗಂಟೆವರೆಗೆ ಕಾರ್ಯಾಚರಣೆ ನಡೆಸಿತು.

ಬಾಂಬ್ ನಿಷ್ಕ್ರೀಯ ದಳ
ಬಾಂಬ್ ನಿಷ್ಕ್ರೀಯ ದಳ

ಶಿವಮೊಗ್ಗದಲ್ಲಿ ಭೀತಿ ಸೃಷ್ಟಿಸಿದ ಬಾಕ್ಸ್​ಗಳು

ಶಿವಮೊಗ್ಗ: ಭಾನುವಾರ ದಿನಪೂರ್ತಿ ಆತಂಕ ಮೂಡಿಸಿದ್ದ ಅನುಮಾನಾಸ್ಪದ ಬಾಕ್ಸ್​ಗಳನ್ನು ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳದವರು ತೆರೆದಿದ್ದು, ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ 12 ಗಂಟೆಗೆ ಶಿವಮೊಗ್ಗದ ಮುಖ್ಯ ರೈಲು ನಿಲ್ದಾಣದ ಪಾರ್ಕಿಂಗ್​ ಬಳಿ ಎರಡು ಕಬ್ಬಿಣದ ಬಾಕ್ಸ್​ಗಳು ಸಿಕ್ಕಿದ್ದವು. ಬಾಂಬ್ ನಿಷ್ಕ್ರೀಯ ದಳದವರು ಶಿವಮೊಗ್ಗಕ್ಕೆ ರಾತ್ರಿ 7.45ರ ಸುಮಾರಿಗೆ ಆಗಮಿಸಿದ್ದರು.

ಮೊದಲು ಸ್ಕ್ಯಾನ್ ಮಾಡುವ ಮೂಲಕ ಬಾಕ್ಸ್‌ಗಳನ್ನು ನೋಡಲು ಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಬಳಿಕ ನಸುಕಿನ ಜಾವ 2:35ಕ್ಕೆ ಬಾಕ್ಸ್​ಗಳ ಬೀಗ ತೆರೆದು ನೋಡಿದಾಗ ಬಿಳಿ ಬಣ್ಣದ ಪುಡಿ ಕಂಡುಬಂದಿದೆ. ಬಿಳಿ ಬಣ್ಣದ ಗೊಬ್ಬರದ ಚೀಲದಲ್ಲಿದ್ದು, ಇವುಗಳನ್ನು ಪೊಲೀಸರು ಹಾಗೂ ಬಾಂಬ್ ನಿಷ್ಕ್ರೀಯ ತಂಡ ಬೆಂಗಳೂರಿನ ಎಫ್​ಎಸ್​ಎಲ್ ಲ್ಯಾಬ್​ಗೆ ಕಳುಹಿಸಿದ್ದಾರೆ.

ಶಿವಮೊಗ್ಗ ಸೇಫ್-ಶಾಸಕ ಚನ್ನಬಸಪ್ಪ: ಕಾರ್ಯಾಚರಣೆ ನಂತರ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಭಾರಿ ಅನಾಹುತದಿಂದ ಶಿವಮೊಗ್ಗ ಸೇಫ್​ ಆಗಿದೆ. ಬಾಕ್ಸ್​ನಲ್ಲಿ ಸಿಕ್ಕಿದ್ದು ಬಿಳಿ ಬಣ್ಣದ ಪೌಡರ್​, ಅದು ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ. ಇಷ್ಟು ದೊಡ್ಡ ಮಟ್ಟದ ವಸ್ತುಗಳನ್ನು ಹೇಗೆ ಇಲ್ಲಿಗೆ ತಂದರು? ಈ ಬಗ್ಗೆ ಮುಂದೆ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಬೇಕು. ನಾವೂ ಕೂಡ ನಗರದಲ್ಲಿ ಎಚ್ಚರಿಕೆ ವಹಿಸುವ ಸಂದರ್ಭ ಬಂದಿದೆ. ಪೌಡರ್​ ಅನ್ನು ಬೆಂಗಳೂರಿನ ಲ್ಯಾಬ್​ಗೆ ಕಳುಹಿಸಲಾಗಿದೆ. ರಿಪೋರ್ಟ್​ ಬಂದ ಮೇಲೆ ಸತ್ಯಾಂಶ ತಿಳಿಯಲಿದೆ ಎಂದರು.

ಈ ಬಾಕ್ಸ್‌ಗಳನ್ನು ಅನ್ನು​ ಗೋಣಿ ಚೀಲದಲ್ಲಿ ಮುಚ್ಚಲಾಗಿತ್ತು. ಆಟೋ ಚಾಲಕನೋರ್ವ ಇದನ್ನು ಕಂಡು ತಕ್ಷಣ ರೈಲ್ವೆ ಪೊಲೀಸರು ಹಾಗೂ ಜಯನಗರ ಪೊಲೀಸ್ ಠಾಣೆಗೆ ತಿಳಿಸಿದ್ದರು. ಬಾಕ್ಸ್​ಗಳ ಮೇಲೆ ಬಾಂಗ್ಲಾದೇಶದ ಹೆಸರು ಬರೆಯಲಾಗಿತ್ತು. ಹೀಗಾಗಿ ಆತಂಕ ಸೃಷ್ಟಿಯಾಗಿತ್ತು. ಶಿವಮೊಗ್ಗದ ಶ್ವಾನದಳ ಹಾಗೂ ಬಾಂಬ್ ಪತ್ತೆ ತಂಡ ಬಂದು ಪರಿಶೀಲನೆ ನಡೆಸಿದಾಗ ಬಾಂಬ್ ಪತ್ತೆ ಯಂತ್ರಕ್ಕೆ ಸ್ಪೋಟಕ ವಸ್ತುಗಳು ಇರುವಂತಹ ಅಂಶ ಕಂಡುಬಂದಿದೆ. ಪೊಲೀಸರು ಎಂ ಸ್ಯಾಡ್ ತುಂಬಿ ಚೀಲಗಳನ್ನು ಬಾಕ್ಸ್‌ಗಳ ಸುತ್ತ ಒಡೆಯದಂತೆ ಸಂರಕ್ಷಿಸಿದರು. ನಂತರ ಬೆಂಗಳೂರಿನಿಂದ ಬಾಂಬ್ ಪತ್ತೆ ಹಾಗೂ ಬಾಂಬ್ ನಿಷ್ಕ್ರೀಯ ದಳವನ್ನು ಶಿವಮೊಗ್ಗಕ್ಕೆ ಕರೆಸಲಾಗಿತ್ತು.

ಇದನ್ನೂ ಓದಿ:ಶಿವಮೊಗ್ಗ ರೈಲು ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್​ ಪತ್ತೆ: ಜನರಲ್ಲಿ ಆತಂಕ

Last Updated : Nov 6, 2023, 12:26 PM IST

ABOUT THE AUTHOR

...view details