ಶಿವಮೊಗ್ಗ :ಕೇವಲ ಪ್ರಾರ್ಥನೆ, ಪೂಜೆಗಷ್ಟೇ ಸೀಮಿತವಾಗಿದ್ದ ಅರ್ಚಕರು ಇದೀಗ ಸಾಮಾಜಿಕ ಸೇವೆಗೂ ಮುಂದಾಗಿದ್ದಾರೆ.
ಪೂಜೆ, ಪುನಸ್ಕಾರವಷ್ಟೇ ಅಲ್ಲ.. ರಕ್ತದಾನಕ್ಕೂ ಜೈ ಎಂದ ಅರ್ಚಕರು.. - blood donation by priests
ರಕ್ತನಿಧಿಗಳಲ್ಲಿ ರಕ್ತ ಶೇಖರಣೆ ಕೊರತೆ ನೀಗಿಸಲು ಶಿವಮೊಗ್ಗದ ಪುರೋಹಿತ ಯುವ ಪರಿಷತ್ನ 35 ರಿಂದ 45 ಪುರೋಹಿತರು ರಕ್ತದಾನ ಮಾಡಿದ್ದಾರೆ.

ಪುರೋಹಿತರಿಂದ ರಕ್ತದಾನ
ಪುರೋಹಿತರಿಂದ ರಕ್ತದಾನ..
ಲಾಕ್ಡೌನ್ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಶೇಖರಣೆ ಕೊರತೆಯಾಗಿತ್ತು. ಹೀಗಾಗಿ ರೋಗಿಗಳಿಗೆ ರಕ್ತ ಪೂರೈಕೆ ಮಾಡಲು ಸಮಸ್ಯೆಯಾಗಿತ್ತು. ಕೊರೊನಾ ಸಮಸ್ಯೆ ಹೊರತುಪಡಿಸಿ, ಇತರೆ ರೋಗಿಗಳಿಗೆ ರಕ್ತದ ತುರ್ತು ಅವಶ್ಯಕತೆ ಎದ್ದು ಕಾಣುತ್ತಿದೆ. ಈ ಕಷ್ಟವನ್ನು ಮನಗಂಡ ಶಿವಮೊಗ್ಗದ ಪುರೋಹಿತ ಯುವ ಪರಿಷತ್ ಸದಸ್ಯರು ರಕ್ತದಾನಕ್ಕೆ ಮುಂದಾಗಿದ್ದಾರೆ.
ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸುಮಾರು 35 ರಿಂದ 45 ಪುರೋಹಿತರು ರಕ್ತದಾನ ಮಾಡುವುದಲ್ಲದೇ ತಮ್ಮ ಕುಟುಂಬ ವರ್ಗದವರಿಂದಲೂ ರಕ್ತದಾನ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.