ಶಿವಮೊಗ್ಗ:ದೆಹಲಿಯಲ್ಲಿ ನಾಲ್ಕು ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ರೈತರ ಬೆಳೆಯನ್ನು ಮಂಡಿಯಲ್ಲಿ ಅತ್ಯಂತ ಕಡಿಮೆ ದರಕ್ಕೆ ಕೇಳಲಾಗುತ್ತಿದೆ. ಆದರೆ ನಂತರ ಅದನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹೋರಾಟ ನಡೆಸಿದರೆ, ಅವರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತಿದೆ. ಅದೇ ರೀತಿ ಮಾಧ್ಯಮದವರ ಮೇಲೂ ಸಹ ಕೇಸ್ ಹಾಕಲಾಗುತ್ತಿದೆ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ಕೇಂದ್ರದ ವಿರುದ್ಧ ಟಿಕಾಯತ್ ವಾಗ್ದಾಳಿ ರೊಟ್ಟಿಯನ್ನು ಮಾರುಕಟ್ಟೆಯಲ್ಲಿ ಕೊಂಡು ತರುವಂತಾಗಬಾರದು. ಆಹಾರ ವಸ್ತುಗಳನ್ನು ಗೋದಾಮಿನಲ್ಲಿ ಇಡುವಂತಾಗಬಾರದು. ಹಸಿವಿನ ವ್ಯಾಪಾರ ನಡೆಯಬಾರದು. ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಲಾಗುತ್ತಿಲ್ಲ. ಅವರ ಮೇಲೆ ಶೋಷಣೆ ಮಾಡಲಾಗುತ್ತಿದೆ. ಇದಕ್ಕಾಗಿ ಕಾನೂನನ್ನೇ ಬದಲಾವಣೆ ಮಾಡಲಾಗುತ್ತಿದೆ. ಕೃಷಿಯ ಕುರಿತು ಅನೇಕ ವಿರೋಧಿ ಕಾನೂನು ಜಾರಿ ಮಾಡಲಾಗುತ್ತಿದೆ. ಇದೆಲ್ಲಾ ರೈತರಿಗೆ ಹಾನಿಯನ್ನುಂಟು ಮಾಡುತ್ತಿದೆ. ಇದಕ್ಕೆ ಸಾಮಾನ್ಯ ಜನರು ಸಹ ನಮ್ಮ ಹೋರಾಟದಲ್ಲಿ ಭಾಗಿಯಾಗಬೇಕಿದೆ. ಇದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ರೈತ ಮುಖಂಡ ಯದುವೀರ್ ಸಿಂಗ್, ಮೀಡಿಯಾ ಪ್ರಜಾಪ್ರಭುತ್ವದ ಆಧಾರಸ್ಥಂಭವಾಗಿದೆ. ಹೋರಾಟದ ಬಗ್ಗೆ ಬರೆದ ಪತ್ರಕರ್ತರನ್ನು ಅರೆಸ್ಟ್ ಮಾಡಿಸಲಾಗಿದೆ. ಮೀಡಿಯಾವನ್ನು ಕಂಟ್ರೋಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಎಂಎಸ್ಪಿ ಜಾರಿ ಮಾಡಬೇಕಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟವಾಗಿದೆ. ಬಿಜೆಪಿಯನ್ನು ಇಬ್ಬರು ಕಂಟ್ರೋಲ್ ಮಾಡ್ತಾ ಇದ್ದಾರೆ, ಇದು ಪ್ರಜಾಪ್ರಭುತ್ವವಲ್ಲ. ಯಾರು ಚುನಾವಣೆಗೆ ಸಹಾಯ ಮಾಡಿದ್ರು ಅವರಿಗೆ ಕೇಂದ್ರ ಸಹಾಯ ಮಾಡುತ್ತಿದೆ. ಅದಾನಿಯು ಒಂದು ಮಿಲಿಯನ್ನಷ್ಟು ಬೀಜ ಸಂರಕ್ಷಣೆಯ ಗೋದಾಮು ಕಟ್ಟಿದ್ದಾನೆ. ನಮ್ಮ ಹೋರಾಟಕ್ಕೆ ಸಾಮಾನ್ಯ ಜನರು ಸೇರಿದಂತೆ ಇತರರು ಬೆಂಬಲವನ್ನು ನಿಧಾನವಾಗಿ ನೀಡ್ತಿದ್ದಾರೆ. ನಮ್ಮ ಅಜೆಂಡಾ ರಾಷ್ಟ್ರವನ್ನು ಬಂಡವಾಳಶಾಹಿಗಳಿಂದ ಕಾಪಾಡುವುದಾಗಿದೆ. ನಮ್ಮ ಹೋರಾಟವನ್ನು ಕೇಂದ್ರ ಸರ್ಕಾರ ರಾಜಕೀಯಗೊಳಿಸುತ್ತಿದೆ. ಇದರ ಹೊರತಾದ ಹೋರಾಟ ನಮ್ಮದಾಗಿದೆ. ರೈತರನ್ನು ಹಾದಿ ತಪ್ಪಿಸಲಾಗುತ್ತಿದೆ. ರೈತ ವಿರೋಧಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ತರುವ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.