ಕರ್ನಾಟಕ

karnataka

ETV Bharat / state

ಜಾತ್ಯತೀತ ನಾಯಕ ಯಡಿಯೂರಪ್ಪರಿಂದ ಲಿಂಗಾಯತರಿಗೆ ಬಿಜೆಪಿ ಪತ್ರ ಬರೆಯಿಸಿದೆ: ಆಯನೂರು ಮಂಜುನಾಥ್ - BJP letter

ಮಾಜಿ ಸಿಎಂ ಬಿಎಸ್​ವೈ ಅವರಿಂದ ಬಿಜೆಪಿ ನಾಯಕರು ಪತ್ರ ಬರೆಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್
ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್

By

Published : May 11, 2023, 5:26 PM IST

Updated : May 11, 2023, 6:58 PM IST

ಬಿಜೆಪಿ ನಾಯಕರು ಪತ್ರ ಬರೆಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಗಂಭೀರ ಆರೋಪ .

ಶಿವಮೊಗ್ಗ :ವಿಧಾನಸಭೆ ಚುನಾಚಣೆಯಲ್ಲಿ ಲಿಂಗಾಯತರು ಲಿಂಗಾಯತರಿಗೆ ಮತ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಂದ ಬಿಜೆಪಿ ಪತ್ರ ಬರೆಯಿಸಿದ್ದಾರೆ ಎಂಬ ಆರೋಪವನ್ನು‌ ಶಿವಮೊಗ್ಗ ನಗರ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮಾಡಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಶಾಂತಿಯುತ‌ ಮತದಾನ ನಡೆದಿದೆ. ಶಾಂತಿಯುತ ಮತದಾನ ನಡೆಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿಸುತ್ತೇನೆ ಎಂದರು.

ಶೇ 68.78 ಮತದಾನವಾಗಿದ್ದು, ಪೋಸ್ಟಲ್ ಮತದಾನ ಸೇರಿದರೇ ಶೇ 70 ರಷ್ಟು ಮತದಾನವಾಗಲಿದೆ. ನಾವು ಶಾಂತಿ, ಅಭಿವೃದ್ಧಿಯ ಮೇಲೆ ಚುನಾವಣೆ ನಡೆಸಿದ್ದೇವೆ. ನಮ್ಮ‌ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹಣ ಹೊಳೆಯನ್ನು ಹರಿಸಿವೆ. ಎರಡು ಪಕ್ಷಗಳು ಪ್ರಣಾಳಿಕೆಯನ್ನು ಹೇಳದೆ, ಜಾತಿ ಮತ್ತು ಹಣದ ಆಧಾರದ ಮೇಲೆ ಚುನಾವಣೆಯನ್ನು ಮುಕ್ತಾಯ ಮಾಡಿದ್ದಾರೆ ಎಂದು ಆಯನೂರು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಜಾತಿ ಮತ್ತು ಜಾತಿ ಒಳಗೆ ಇರುವ ಉಪ ಜಾತಿಗಳನ್ನು ಇಟ್ಟುಕೊಂಡು ಮತ ಕೇಳಿದ್ದಾರೆ. ಅದೇ ರೀತಿ ನಿನ್ನೆ ಮಧ್ಯಾಹ್ನದವರೆಗೂ ಸಹ ಹಣವನ್ನು ಹಂಚಿದ್ದಾರೆ. ಬಿಜೆಪಿಯವರು ಸಹ ಮತಗಟ್ಟೆ ಬಳಿ ಬಜರಂಗಿಯ ಫೋಟೊಗಳನ್ನು ಇಟ್ಟುಕೊಂಡು, ಮಕ್ಕಳಿಗೆ ಆಂಜನೇಯನ ಮುಖವಾಡ ಹಾಕಿ, ಕೇಸರಿ ಶಾಲು, ಗೋ ಪೂಜೆಯ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದರು ಎಂದು ಆಯನೂರು ಮಂಜುನಾಥ್ ದೂರಿದರು.

ಮೊದಲ ಬಾರಿಗೆ ಎಲ್ಲಾ ಜನಾಂಗದ ನಾಯಕರಾಗಿದ್ದ ಯಡಿಯೂರಪ್ಪನವರಿಂದ ಲಿಂಗಾಯತರಿಗೆ ಬಿಜೆಪಿ ಹೈಕಮಾಂಡ್​ ಪತ್ರ ಬರೆಯಿಸಿ, ಲಿಂಗಾಯತರು ಲಿಂಗಾಯತರಿಗೆ ಮತ ನೀಡಿ‌ ಎಂದು‌ ಜಾತಿ‌ ಆಧಾರದ ಮೇಲೆ ಮತ ಕೇಳುವಂತೆ ಮಾಡಿದ್ದಾರೆ. ಅಭಿವೃದ್ಧಿ, ಸಾಧನೆ ಮುಂದೆ ಮಾಡುವ ಕೆಲಸಗಳ ಬಗ್ಗೆ ಎಲ್ಲೂ ಅವರು ಮತ ಕೇಳಿಲ್ಲ. ನಾವು‌ ಹಾಗೆ ಮಾಡದೆ ಶಾಂತಿ ಸೌಹಾರ್ದತೆ ಕುರಿತು ಮಾತನಾಡಿದ್ದಕ್ಕೆ ಸ್ಪಂದಿಸಿದ್ದಾರೆ ಎಂದರು.

ನಾವು ತಡವಾಗಿ ಚುನಾವಣಾ ಪ್ರಚಾರ ಪ್ರಾರಂಭಿಸಿದ್ಎವು. ನಿನ್ನೆ ಮತದಾರರನ್ನು ನೋಡಿದಾಗ ಖುಷಿ ಅಗುತ್ತಿತ್ತು. ನಮ್ಮ‌ 32 ವಾರ್ಡ್​ಗಳಲ್ಲಿ‌ 14 ವಾರ್ಡ್​ಗಳು ಅಲ್ಪಸಂಖ್ಯಾತರು ಮತ್ತು ಬಹು‌ ಸಂಖ್ಯಾತರಿದ್ದಾರೆ‌‌. ಕೆಲವು ಕಡೆ ತ್ರಿಕೋನ‌ ಸ್ಪರ್ಧೆ ಇದ್ದು, ನಾವು‌ 32 ವಾರ್ಡ್​ಗಳಲ್ಲಿ ನಮ್ಮ ಸ್ಪರ್ಧೆ ಇದೆ. ಕೆಲ ವಾರ್ಡ್​ಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ‌ ರಾಜಕೀಯ ಪ್ಯಾರಲಸಿಸ್ ಆಗಿದೆ. ನಮಗೆ ಶಾಂತಿಯನ್ನು ಬಯಸುವವರು ನಮಗೆ ಬೆಂಬಲ ನೀಡಿದ್ದಾರೆ. ಇದರಿಂದ ನಮಗೆ ಗೆಲುವಿನ ವಿಶ್ವಾಸವಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.

ಈ ವೇಳೆ‌ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ರವರು, ಶಿವಮೊಗ್ಗ ನಗರ ಮತ್ತು ಗ್ರಾಮಾಂತರ, ಭದ್ರಾವತಿಯಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು. ಈ ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ವೈ. ಹೆಚ್. ನಾಗರಾಜ್, ಐಡಿಯಲ್ ಗೋಪಿ ಉಪಸ್ಥಿತರಿದ್ದರು.

ಭಾರಿ ಅಂತರದಿಂದ ಗೆಲುವು ಸಾಧಿಸುತ್ತೇನೆ : ಹೆಚ್.ಸಿ. ಯೋಗೀಶ್ :ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವನ್ನು ಶಿವಮೊಗ್ಗ ನಗರ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ವ್ಯಕ್ತಪಡಿಸಿದ್ದಾರೆ‌. ಶಿವಮೊಗ್ಗದ ಖಾಸಗಿ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಯಾವಾಗಲು ಸಹ ಜನತೆಯ ಜೊತೆಗೆ ಇರುತ್ತೆನೆ. ಚುನಾವಣೆ ನಡೆಸಲು ಸಹಕಾರ ನೀಡಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

2013 ರಂತೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಾಣಲಿದೆ. ನಮ್ಮ ಕಾರ್ಯಕರ್ತರು ಸಾಕಷ್ಟು ಶಾಂತಿಯುತವಾಗಿ ಚುನಾವಣೆ ನಡೆಸಿದ್ದಾರೆ. ಇನ್ನೂ ಮುಂದೆ ಕಾಂಗ್ರೆಸ್ ಶಾಂತಿಯುತ ಶಿವಮೊಗ್ಗ ಇರುತ್ತದೆ. 68% ಮತದಾನವಾಗಿರುವುದು ಕಾಂಗ್ರೆಸ್ ಗೆ ಅನುಕೂಲವಾಗಲಿದೆ. ಸ್ಲಂ ವಾರ್ಡ್​ಗಳಲ್ಲಿ ನಮಗೆ ಮತ ನೀಡಿದ್ದಾರೆ. ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್ ನಮಗೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಇನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್​ ಜಿಲ್ಲಾ‌ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಮಾತನಾಡಿದ ಜಿಲ್ಲೆಯ 7 ಸ್ಥಾನಗಳನ್ನು ಗೆಲ್ಲುತ್ತೇವೆ. ಜಿಲ್ಲೆಯ ಎರಡು ಕಡೆ ಫೈಟ್ ಇದ್ದು, ಉಳಿದ ಕಡೆ ಕ್ಲಿಯರ್ ಇದೆ. ಎಂದು ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಇದನ್ನೂ ಓದಿ :'ಪ್ರಜಾಪ್ರಭುತ್ವದ ಹತ್ಯೆ ತಡೆಯಲು ನಾವು ಒಟ್ಟಾಗಿ ಬರುತ್ತಿದ್ದೇವೆ': ಉದ್ಧವ್ ಠಾಕ್ರೆ

Last Updated : May 11, 2023, 6:58 PM IST

ABOUT THE AUTHOR

...view details