ಶಿವಮೊಗ್ಗ :ಸಚಿವ ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಸಮಾಧಾನದಿಂದ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಆನಂದ್ ಸಿಂಗ್ ಸಮಾಧಾನದಿಂದ ಇದ್ದಾರೆ : ನಳೀನ್ ಕುಮಾರ್ ಕಟೀಲ್ - ನಳಿನ್ ಕುಮಾರ್ ಕಟೀಲ್ ಲೇಟೆಸ್ಟ್ ನ್ಯೂಸ್
ಸಿಎಂ ಭೇಟಿ ಬಳಿಕ ಸಚಿವ ಆನಂದ್ ಸಿಂಗ್ ಸಮಾಧಾನದಿಂದ ಇದ್ದಾರೆ. ಯಾವುದೇ ಅಸಮಾಧಾನ ಇಲ್ಲ. ಇದರಿಂದ ನಿಮಗೇನಾದರೂ ಸಮಸ್ಯೆ ಇದಿಯಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು..
ನಳೀನ್ ಕುಮಾರ್ ಕಟೀಲ್
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆಗಾಗಿ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಸೊರಬ ಕ್ಷೇತ್ರದ ಕೆಲವು ಗೊಂದಲಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗ ಯಾವುದೇ ಗೊಂದಲ ಇಲ್ಲ, ಎಲ್ಲವೂ ಸರಿಯಾಗಿದೆ ಎಂದರು.
ಸಿಎಂ ಭೇಟಿ ಬಳಿಕ ಸಚಿವ ಆನಂದ್ ಸಿಂಗ್ ಸಮಾಧಾನದಿಂದ ಇದ್ದಾರೆ. ಯಾವುದೇ ಅಸಮಾಧಾನ ಇಲ್ಲ. ಇದರಿಂದ ನಿಮಗೇನಾದರೂ ಸಮಸ್ಯೆ ಇದಿಯಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಇನ್ನು, ಯತ್ನಾಳ್ ಅಸಮಾಧಾನ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಅಸಮಾಧಾನ ಇಲ್ಲ. ಕೇವಲ ಗಣೇಶ್ ಉತ್ಸವದ ಬಗ್ಗೆ ಮಾತನಾಡಿದ್ದಾರೆ ಎಂದರು.