ಶಿವಮೊಗ್ಗ: 40% ಕಮಿಷನ್ ಆರೋಪದ ಕುರಿತು ಪ್ರಧಾನಮಂತ್ರಿ ಕಾರ್ಯಾಲಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಲ್ಲಿ ಸೂಕ್ತ ದಾಖಲೆ ಕೇಳಿರುವುನ್ನು ಸಚಿವರಾದ ಶಿವರಾಮ್ ಹೆಬ್ಬಾರ್ ಮತ್ತು ನಾರಾಯಣ ಗೌಡ ಸ್ವಾಗತಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ಆರೋಪ ಕುರಿತು ತನಿಖೆ ನಡೆಸಿದರೆ ಸತ್ಯಾನುಸತ್ಯತೆ ಹೊರ ಬರುತ್ತದೆ.
40% ಕಮಿಷನ್ ಆರೋಪ ಪ್ರಕರಣದ ಕುರಿತಂತೆ ಸಚಿವರಾದ ಶಿವರಾಮ್ ಹೆಬ್ಬಾರ್ ಮತ್ತು ನಾರಾಯಣ ಗೌಡ ಅವರು ಪ್ರತಿಕ್ರಿಯೆ ನೀಡಿರುವುದು.. ತನಿಖೆಯಿಂದ ತಪ್ಪಿತಸ್ಥರು ಯಾರೆಂದು ತಿಳಿದು ಬರುತ್ತದೆ. ತನಿಖೆಗಳಾದರೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಹಾಗಾಗಿ, ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ, ಗೃಹ ಇಲಾಖೆಗೆಯು ಕೆಂಪಣ್ಣ ಅವರಿಗೆ ಕಮಿಷನ್ ಆರೋಪದ ಮೇರೆಗೆ ಸೂಕ್ತ ದಾಖಲೆ ಕೇಳಿದ್ದಾರೆ. ಇದು ಸ್ವಾಗತರ್ಹ ಎಂದರು.
ಇದನ್ನೂ ಓದಿ:ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದ ಸಹಜ : ವಿನಯ್ ಗುರೂಜಿ