ಕರ್ನಾಟಕ

karnataka

ETV Bharat / state

ಬಿಜೆಪಿ ನಾಯಕರು ವಾದ-ವಿವಾದ ಮಾಡದೆ, ನೆರೆ ಪರಿಹಾರ ತರುವತ್ತ ಗಮನ ಹರಿಸಬೇಕು: ಭಾನು ಪ್ರಕಾಶ್​​

ಇನ್ನು ಕೇಂದ್ರ ಪರಿಹಾರ ಕೊಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆ ಹಲವೆಡೆ ಚರ್ಚೆ ನಡೆಯುತ್ತಿದೆ. ಹಲವರು ಧ್ವನಿ ಎತ್ತಿ ಪ್ರಶ್ನಿಸುತ್ತಿದ್ದಾರೆ. ಇದು ತಪ್ಪಲ್ಲ. ಹಾಗಂತ ಐದು ವರ್ಷದಿಂದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರವನ್ನ ಯಾರು ಸಂಶಯದಿಂದ ನೋಡುತ್ತಿಲ್ಲ. ಪ್ರಜಾಪ್ರಭುತ್ವದ ದೇಶದಲ್ಲಿ ಧ್ವನಿ ಎತ್ತುವ ಹಕ್ಕಿದೆ. ಅದನ್ನು ಯಾರೂ ಬೇಡ ಎನ್ನಲಾಗದು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನು ಪ್ರಕಾಶ್ ಹೇಳಿದ್ದಾರೆ.

ಬಿಜೆಪಿ ನಾಯಕರು ವಾದ- ವಿವಾದ ಮಾಡದೆ, ಪರಿಹಾರ ತರುವತ್ತ ಗಮನ ಹರಿಸಬೇಕು: ಭಾನು ಪ್ರಕಾಶ್

By

Published : Oct 3, 2019, 10:06 PM IST

Updated : Oct 3, 2019, 10:12 PM IST

ಶಿವಮೊಗ್ಗ:ರಾಜ್ಯದ ಬಿಜೆಪಿ ನಾಯಕರು ವಾದ-ವಿವಾದ ಹಾಗೂ ಪತ್ರಿಕಾ ಹೇಳಿಕೆ ನೀಡುವುದನ್ನು ಕಡಿಮೆ ಮಾಡಿ ರಾಜ್ಯಕ್ಕೆ ನೆರೆ ಪರಿಹಾರ ತರುವುದಕ್ಕೆ ಯತ್ನ ನಡೆಸಬೇಕು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನು ಪ್ರಕಾಶ್ ರಾಜ್ಯ ಬಿಜೆಪಿ ನಾಯಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಬಿಜೆಪಿ ನಾಯಕರು ವಾದ-ವಿವಾದ ಮಾಡದೆ, ಪರಿಹಾರ ತರುವತ್ತ ಗಮನ ಹರಿಸಬೇಕು: ಭಾನು ಪ್ರಕಾಶ್

ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಕ್ಯಾಬಿನೆಟ್ ಸಭೆ ಇಂದು ನಡೆಯುತ್ತಿದ್ದು, ರಾಜ್ಯದ ಅಧಿಕಾರಿಗಳನ್ನ ಅಂಕಿ-ಅಂಶಗೊಳೊಂದಿಗೆ ಬರಲು ಕೇಂದ್ರ ತಿಳಿಸಿದೆ. ಇವತ್ತು-ನಾಳೆಯೊಳಗೆ ಹಣ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

ಇನ್ನು ಕೇಂದ್ರ ಪರಿಹಾರ ಕೊಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆ ಹಲವೆಡೆ ಚರ್ಚೆ ನಡೆಯುತ್ತಿದೆ. ಹಲವರು ಧ್ವನಿ ಎತ್ತಿ ಪ್ರಶ್ನಿಸುತ್ತಿದ್ದಾರೆ. ಇದು ತಪ್ಪಲ್ಲ. ಹಾಗಂತ ಐದು ವರ್ಷದಿಂದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರವನ್ನ ಯಾರು ಸಂಶಯದಿಂದ ನೋಡುತ್ತಿಲ್ಲ. ಪ್ರಜಾಪ್ರಭುತ್ವದ ದೇಶದಲ್ಲಿ ಧ್ವನಿ ಎತ್ತುವ ಹಕ್ಕಿದೆ. ಅದನ್ನು ಯಾರೂ ಬೇಡ ಎನ್ನಲಾಗದು ಎಂದರು.

ಇನ್ನು ಸಾಮಾಜಿಕ ಹೋರಟಗಾರ ಚಕ್ರವರ್ತಿ ಸೊಲಿಬೆಲಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೂಲಿಬೆಲೆ ಯಾಕೆ ಈ ರೀತಿ ಹೇಳಿಕೆ ನೀಡಿದ್ರು ಗೊತ್ತಿಲ್ಲ. ಸಾಮಾಜಿಕ ಕಾರ್ಯಕರ್ತರ ನಡುವೆಯೇ ಇಂತಹ ಚರ್ಚೆಯಾಗುತ್ತಿರುವುದು ಒಳ್ಳೆಯದಲ್ಲ. ನಾವೆಲ್ಲರು ಒಟ್ಟಾಗಿ ಯಡಿಯೂರಪ್ಪ ಅವರ ಬೆನ್ನಿಗೆ ನಿಂತುಕೊಂಡು ಕೇಂದ್ರದೊಂದಿಗೆ ಮಾತನಾಡಿ ಹಣ ತರಬೇಕು ಎಂದರು.

Last Updated : Oct 3, 2019, 10:12 PM IST

ABOUT THE AUTHOR

...view details