ಕರ್ನಾಟಕ

karnataka

ETV Bharat / state

ಬಿಜೆಪಿ ದಲಿತ ವಿರೋಧಿಯಲ್ಲ : ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ... - ದಲಿತ ವಿರೋಧಿ

ಕಾಂಗ್ರೆಸ್ ನವರು ಮೀಸಲಾತಿಯನ್ನು ನೀಡಿದ್ದು ನಾವೇ ಎಂದು ಹೇಳುತ್ತಾರೆ. ಆದರೆ ಮೀಸಲಾತಿ ನೀಡಿದ್ದು ಅಂಬೇಡ್ಕರ್ ಹಾಗೂ ಅವರು ಬರೆದ ಸಂವಿಧಾನ ಎಂದು ಬಿಜೆಪಿ ಎಸ್ ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು.

Narayana Swamy's statement
ಛಲವಾದಿ ನಾರಾಯಣ ಸ್ವಾಮಿ

By

Published : Sep 8, 2020, 6:41 PM IST

ಶಿವಮೊಗ್ಗ:ಬಿಜೆಪಿ ಪಕ್ಷ ದಲಿತ ವಿರೋಧಿಯಲ್ಲ. ಮುಂದಿನ ದಿನಗಳಲ್ಲಿ ದಲಿತ ಸಂಗಮ ಆಗುತ್ತದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು.

ಛಲವಾದಿ ನಾರಾಯಣ ಸ್ವಾಮಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಎಂದಿಗೂ ದಲಿತ ವಿರೋಧಿ ಅಲ್ಲ. ನಮ್ಮ ಪಕ್ಷ ದಲಿತರ ಪರವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಬಿಜೆಪಿ ದಲಿತ ವಿರೋಧಿ ಎಂದು ವಿರೋಧಿ ಪಟ್ಟವನ್ನು ಕಟ್ಟಿದೆ. ಆದರೆ ಎಂದಿಗೂ ಬಿಜೆಪಿ ದಲಿತ ವಿರೋಧಿ ಅಲ್ಲಾ ಮುಂದಿನ ದಿನಗಳಲ್ಲಿ ದಲಿತ ಸಂಗಮ ಆಗಲಿದೆ ಎಂದರು.

ನಂತರ ಮಾತು ಮುಂದುವರೆಸಿ, ಜನರಿಗೆ ಅರ್ಥವಾಗಿದೆ ಯಾರು ದಲಿತ ವಿರೋಧಿ, ಯಾರು ಪರವಾಗಿದ್ದಾರೆ ಎಂದ ಅವರು, ಕಾಂಗ್ರೆಸ್ ಕೇವಲ ದಲಿತರನ್ನು ಓಟ್ ಬ್ಯಾಂಕ್ ಗೆ ಬಳಸಿಕೊಂಡಿದೆ ಎಂದು ಆರೋಪಿಸಿ, ಅದು ನಶಿಸುವ ಸ್ಥಿತಿಗೆ ತಲುಪಿದೆ ಎಂದರು.

ಕಾಂಗ್ರೆಸ್ ನವರು ಮೀಸಲಾತಿಯನ್ನು ನೀಡಿದ್ದು ನಾವೇ ಎಂದು ಹೇಳುತ್ತಾರೆ. ಆದರೆ ಮೀಸಲಾತಿ ನೀಡಿದ್ದು ಅಂಬೇಡ್ಕರ್ ಹಾಗೂ ಅವರು ಬರೆದ ಸಂವಿಧಾನ ಎಂದು ಅಭಿಪ್ರಾಯ ಪಟ್ಟರು.

ನಾನು ಎಸಿ ಮೋರ್ಚಾದ ಅಧ್ಯಕ್ಷನಾದ ನಂತರ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ಈಗ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯ ಪ್ರವಾಸ ಕೈಗೊಂಡು ಈಗಾಗಲೇ ಹದಿನೈದು ಜಿಲ್ಲೆಗಳ ಪ್ರವಾಸ ಮಾಡಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೇನೆ ತಿಳಿಸಿದರು.

ABOUT THE AUTHOR

...view details