ಶಿವಮೊಗ್ಗ:ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಹಿಂದೆ ಖುಷ್ಬು ವಿರುದ್ಧ ಬಿಜೆಪಿ ರಾಜ್ಯ-ದೇಶದಾದ್ಯಂತ ಹೋರಾಟ ಮಾಡಿತ್ತು. ಈಗ ಅದೇ ಖುಷ್ಬು ಅವರನ್ನು ಮುನಿರತ್ನ ಪರ ಬಿಜೆಪಿಯವರು ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು ಆಗ ಶೋಭಾ ಮೇಡಂ ಕೂಡ ಬಾಯಿ ಹರಿದುಕೊಂಡಿದ್ದರು. ಈಗ ಸುಮ್ಮನಾಗಿಬಿಟ್ಟಿದೆ ಆ ಯಮ್ಮ. ಉತ್ತರ ಪ್ರದೇಶದ ಹೆಣ್ಣು ಮಗಳು ಹತ್ಯೆಯಾದಾಗ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈಗ ಎಲೆಕ್ಷನ್ ಟೈಮ್ನಲ್ಲೂ ಎಲ್ಲಿಯೂ ಪ್ರಚಾರಕ್ಕೆ ಬಂದಿಲ್ಲ. ಯಾಕೋ ಏನೋ ಆ ವಿಷಯದ ಕುರಿತು ಯಡಿಯೂರಪ್ಪರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.
ಮಾತು ಮುಂದುವರೆಸಿದ ಅವರು, ಮುನಿರತ್ನನಾದರೂ ಬರಲಿ, ಖುಷ್ಬುವೇ ಬರಲಿ. ಯಾವುದೇ ತತ್ವ-ಸಿದ್ಧಾಂತವಿಲ್ಲದೆ ಬಿಜೆಪಿ ಕರೆದುಕೊಂಡಿದೆ. ಆರ್.ಆರ್. ನಗರ ಮತ್ತು ಶಿರಾ ಎರಡರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾನು ಕೂಡ ಆ ಎರಡೂ ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ಇದೇ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಈ ಹಿಂದೆ ಯಡಿಯೂರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಮೋದಿಯವರನ್ನು ಕರೆಸಿ, ಮುನಿರತ್ನ ಭ್ರಷ್ಟಾಚಾರಿ. ಅವರಿಗೆ ಮತ ಹಾಕಬೇಡಿ ಎಂದು ಹೇಳಿಸಿದ್ದರು. ಆದರೆ ಈಗ ಮುನಿರತ್ನ ಒಳ್ಳೆ ಮನುಷ್ಯ ಎಂದು ಸಿ.ಟಿ.ರವಿ ಹೇಳ್ತಾರೆ. ಎಲೆಕ್ಷನ್ ನಡೆಸದೇ ನಿಲ್ಲಿಸಿದ್ದು ನಾವಾ? ಬಿಜೆಪಿಯವರಾ? ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗೆ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಹೋದವರು ಬಿಜೆಪಿಯವರೇ. ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ ಎಂದು ವಾಗ್ದಾಳಿ ನಡೆಸಿದರು.