ಕರ್ನಾಟಕ

karnataka

ETV Bharat / state

ಅನರ್ಹರಿಗೆ ಟಿಕೆಟ್​ ಕೊಟ್ಟೇ ಕೊಡ್ತೇವಿ... ಎಲ್ಲ ಊಹಾಪೋಹಗಳಿಗೆ ತೆರೆ ಎಳೆದ ಸಿಎಂ - bs yadiyurappa news

ಉಪ ಚುನಾವಣೆಗೆ ಬಿಜೆಪಿ ಅನರ್ಹರಿಗೆ ಟಿಕೆಟ್​ ನೀಡುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ಈ ಹಿನ್ನೆಲೆ ಈ ಸಂಶಯಕ್ಕೆ ಕೊನೆಗೂ ಸಿಎಂ ಯಡಿಯೂರಪ್ಪ ಉತ್ತರ ನೀಡಿದ್ದಾರೆ. ಎಲ್ಲ ಅನರ್ಹರಿಗೂ ಬಿಜೆಪಿಯಿಂದ ಟಿಕೆಟ್​ ನೀಡಿ ಗೆಲ್ಲಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅನರ್ಹರಿಗೆ ಟಿಕೆಟ್​ ನೀಡಿ ಅವರ ಗೆಲುವಿಗೆ ಶ್ರಮಿಸುತ್ತೇವೆ

By

Published : Sep 30, 2019, 12:30 PM IST

Updated : Sep 30, 2019, 12:39 PM IST

ಶಿವಮೊಗ್ಗ: ಬಿಜೆಪಿಗಾಗಿ ರಾಜೀನಾಮೆ ನೀಡಿದ ಎಲ್ಲಾ ಶಾಸಕರುಗಳಿಗೆ ಬಿಜೆಪಿಯಿಂದಲೇ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಕುರಿತು ನಾನು ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧಾರ ಮಾಡಿದ್ದೇವೆ. ಈ ಕುರಿತು ಯಾವ ಗೂಂದಲವೂ ಇಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ಮು ಗೆಲ್ಲಿಸುವ ಕುರಿತು ಆಯಾ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು.

ಅನರ್ಹರಿಗೆ ಟಿಕೆಟ್​ ನೀಡಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದ ಸಿಎಂ

ಕೆಲವೇ ಅಂತರದಿಂದ ಸೋತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ಹೊಣೆ

ಇದೇ ವೇಳೆ ಹಿರೆಕೇರೂರಿನಲ್ಲಿ ಯುಬಿ ಬಣಕಾರ ಅಂತಹವರು ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅಂತಹ ಸೋತ ಅಭ್ಯರ್ಥಿಗಳನ್ನೂ ಕಡೆಗಣಿಸುವ ಪ್ರಮೇಯವೇ ಇಲ್ಲ. ಅವರನ್ನ ನಿಗಮ ಮಂಡಳಿಗೆ ನೇಮಕ ಮಾಡಿ ನ್ಯಾಯ ಕೊಡಲಾಗುವುದು. ಅಂತಹವರು ಯಾವುದೇ ಮಾತುಗಳಿಗೆ ಕಿವಿ ಕೊಡದೇ ಪಕ್ಷದ ಅಭಿವೃದ್ಧಿಗೆ ಪಕ್ಷ ನಿಲ್ಲಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಸಿಎಂ ಬಿ ಎಸ್​ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ರಾಜ್ಯದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Last Updated : Sep 30, 2019, 12:39 PM IST

ABOUT THE AUTHOR

...view details