ಶಿವಮೊಗ್ಗ:ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಕ್ಯಾನ್ಸರ್ ರೀತಿಯಲ್ಲಿ ಆಡಳಿತ ನಡೆಸಿವೆ ಎಂದು ಸಂಸದ ಬಿ ವೈ ರಾಘವೇಂದ್ರ ವಾಗ್ದಾಳಿ ನಡೆಸಿದರು.
ನಗರದದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಕ್ಯಾನ್ಸರ್ ರೀತಿಯಲ್ಲಿ ಆಡಳಿತ ನಡೆಸಿ ದೇಶಕ್ಕೆ ತುಂಬಾ ದೊಡ್ಡ ಗಾಯ ಮಾಡಿವೆ. ಆ ಗಾಯವನ್ನು ತೆಗೆಯುವ ಕೆಲಸ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು. ಅಷ್ಟು ವರ್ಷಗಳು ಆಗದೇ ಇರುವ ಆರ್ಟಿಕಲ್ 370, ಮತಾಂತರ ನಿಷೇಧ ಕಾಯ್ದೆ, ಹಿಜಾಬ್, ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸವನ್ನು ನಮ್ಮ ಪ್ರಧಾನಿ ಅವರು ಈಗ ಮಾಡುತ್ತಿದ್ದಾರೆ ಎಂದರು.