ಶಿವಮೊಗ್ಗ: ನಾಮಪತ್ರ ಸಲ್ಲಿಸಿದ ನಂತರ ಪ್ರತಿಯೊಂದು ಬೂತ್ ಮಟ್ಟದಲ್ಲಿ ಸಹ ಸಂಚರಿಸಿ ಪ್ರಚಾರ ಮಾಡಲಾಗುತ್ತಿದೆ ಸೊರಬದ ಕೋಟಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಹೇಳಿದರು.
10 ವರ್ಷದಲ್ಲಿ ಒಂದಿಂಚೂ ಭೂ ಕೊಂಡಿಲ್ವಂತೆ ಸಂಸದ ಬಿ ವೈ ರಾಘವೇಂದ್ರ.. - Shimogga
ಸಚಿವ ಡಿ.ಕೆ ಶಿವಕುಮಾರ್ ಅವರ ಶಿವಮೊಗ್ಗ ಪ್ರಚಾರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಚುನಾವಣೆ ಬಂದಾಗ ಎಲ್ಲ ಪಕ್ಷದ ನಾಯಕರು ಬರುತ್ತಾರೆ. ಈ ಸಂದರ್ಭದಲ್ಲಿ ಅವರ ನೇರ ಅಭಿಪ್ರಾಯ ತಿಳಿಸುವುದು ಸಹಜ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಕಳೆದ ಬಾರಿಗಿಂತಲೂ ಈ ಸಾರಿ ಜನರ ಬೆಂಬಲ ಉತ್ತಮವಾಗಿದೆ ಎಂದರು. ಡಿ.ಕೆ ಶಿವಕುಮಾರ್ ಅವರ ಶಿವಮೊಗ್ಗ ಪ್ರಚಾರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಚುನಾವಣೆ ಬಂದಾಗ ಎಲ್ಲರ ಪಕ್ಷದ ನಾಯಕರು ಬರುತ್ತಾರೆ. ಈ ಸಂದರ್ಭದಲ್ಲಿ ಅವರ ನೇರ ಅಭಿಪ್ರಾಯ ತಿಳಿಸುವುದು ಸಹಜ. ಹಾಗಾಗಿ ನಾವು ವಿರೋಧ ಪಕ್ಷ ಹಾಗೂ ಅವರ ಅಭ್ಯರ್ಥಿ ಏನು ಹೇಳುತ್ತಾರೆ ಅಂತಾ ಚರ್ಚೆ ಮಾಡಲ್ಲ. ನಾವು ಮಾಡಿರುವ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳೇ ಹೇಳಲು ಸಾಕಷ್ಟಿದೆ ಎಂದರು.
ನಂತರ ತಮ್ಮ ಆಸ್ತಿ ಹೆಚ್ಚಳ ಕುರಿತು ಬೇಳೂರು ಗೋಪಾಲಕೃಷ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಹತ್ತು ವರ್ಷದಿಂದ ಒಂದು ಇಂಚು ಭೂಮಿಯನ್ನು ಸಹ ಖರೀದಿ ಮಾಡಿಲ್ಲ ಹಾಗೂ ನಾನು ಆಸ್ತಿಯನ್ನು ಸಹ ಮಾಡಿಲ್ಲ. ಹಿಂದಿದ್ದ ಆಸ್ತಿಯ ಮೌಲ್ಯ ಈಗಿನ ಸಂದರ್ಭಕ್ಕೆ ಮೌಲ್ಯ ಜಾಸ್ತಿ ಆಗಿದೆ ಅಷ್ಟೇ ಎಂದರು.
TAGGED:
Shimogga