ಕರ್ನಾಟಕ

karnataka

ETV Bharat / state

ಶಿವಮೊಗ್ಗ: ರಾತ್ರಿ ವೇಳೆ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ - ಶಿವಮೊಗ್ಗ

ಭದ್ರಾವತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕ್ ಕಳ್ಳನ ಬಂಧನ
ಬೈಕ್ ಕಳ್ಳನ ಬಂಧನ

By

Published : Sep 2, 2020, 7:28 PM IST

ಶಿವಮೊಗ್ಗ:ಭದ್ರಾವತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನು ಕದಿಯುತ್ತಿದ್ದ ಬೈಕ್ ಕಳ್ಳನನ್ನು ಭದ್ರಾವತಿಯ ಹಳೆ ನಗರ ಪೊಲೀಸರು ಬಂಧಿಸಿ, ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ವಾರ ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಬಗ್ಗೆ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ ಪೊಲೀಸರು ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿಯ ನಿವಾಸಿ ವಾಸು ಬೋವಿ (33) ಅಲಿಯಾಸ್ ಕೋಳಿ ಮಂಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೋಳಿ ಮಂಜ ತನ್ನ ಕೃತ್ಯವನ್ನು ಒಪ್ಪಿಕೊಂಡು ಬೈಕ್ ಗಳನ್ನು ನೀಡಿದ್ದಾನೆ.

ಒಂದು ಅನ್ವರ್ ಕಾಲೋನಿಯ ಬೈಕ್, ಇನ್ನೂಂದು ಹಾಸನ ಜಿಲ್ಲೆ ಆಲೂರು ಪೊಲೀಸ್‌ ಠಾಣಾ ವ್ಯಾಪ್ತಿಯದ್ದು ಎಂದು ತಿಳಿದು ಬಂದಿದೆ. ಎರಡು ಬೈಕ್ ಗಳು‌ 54 ಸಾವಿರ ರೂ. ಮೌಲ್ಯದ್ದಾಗಿದೆ.

ABOUT THE AUTHOR

...view details