ಕರ್ನಾಟಕ

karnataka

ETV Bharat / state

ಲಾರಿ - ಬೈಕ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು - Bike rider death in accident at Shimoga

ಭದ್ರಾವತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ, ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಲಾರಿ - ಬೈಕ್ ನಡುವೆ ಡಿಕ್ಕಿ,  Bike rider death in accident at Shimoga
ಲಾರಿ - ಬೈಕ್ ನಡುವೆ ಡಿಕ್ಕಿ

By

Published : Dec 31, 2019, 12:24 PM IST

Updated : Dec 31, 2019, 12:37 PM IST

ಶಿವಮೊಗ್ಗ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವಿಗೀಡಾದ ಘಟನೆ ನಗರದ ಎಂ ಆರ್ ಎಸ್ ಸರ್ಕಲ್​ನಲ್ಲಿ ನಡೆದಿದೆ.

ಭದ್ರಾವತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ, ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ ಬಿ ಎಸ್ ನಗರದ ನಿವಾಸಿ ಪ್ರಸಾದ್(35) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣ ಜರುಗಿದ ನಂತರ ಲಾರಿ ಚಾಲಕ ಲಾರಿ ನಿಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ತಕ್ಷಣವೇ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಲಾರಿ - ಬೈಕ್ ನಡುವೆ ಡಿಕ್ಕಿ

ಈ ಸಂಬಂಧ ಪೂರ್ವ ಸಂಚಾರಿ ವಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 31, 2019, 12:37 PM IST

ABOUT THE AUTHOR

...view details