ಕರ್ನಾಟಕ

karnataka

ETV Bharat / state

ವಿಧಿಯಾಟಕ್ಕೆ ಬಲಿಯಾದ ಕುಟುಂಬ: ಅನಾಥರಾದ ಮಕ್ಕಳು - ಈಟಿವಿ ಭಾರತ​ ಕರ್ನಾಟಕ

ಶಿವಮೊಗ್ಗದಲ್ಲಿ ಮೂರು ದಿನಗಳ ಹಿಂದೆ ಅಪಘಾತವಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆಯ ಚಿಕಿತ್ಸೆಯ ವೆಚ್ಚವನ್ನು ಗೃಹ ಸಚಿವ ಆರಗ ಜ್ಞಾನೇಂದ್ರರವರು ಕುಟುಂಬಕ್ಕೆ ವಾಪಸ್​​ ಕೊಡಿಸಿದ್ದಾರೆ.

bike-accident-two-family-orphaned-in-shivamogga
ಅನಾಥರಾದ ಮಕ್ಕಳು

By

Published : Nov 14, 2022, 8:28 PM IST

ಶಿವಮೊಗ್ಗ: ವಿಧಿಯಾಟಕ್ಕೆ ಎರಡು ಕುಟುಂಬಗಳು ಅನಾಥವಾಗಿರುವ ಘಟನೆ ಹೊಸನಗರ ತಾಲೂಕು ಖೈರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಪದ ಕೈ ಗ್ರಾಮದಲ್ಲಿ ನಡೆದಿದೆ. ಮೊನ್ನೆ ದಿನ ಶಿವಮೊಗ್ಗ- ಉಡುಪಿ ಜಿಲ್ಲೆಯ ಗಡಿ ಬಾಗದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ.

ಒಂದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕಾಲು ಕಟ್ ಆಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಹ ಸಾವನ್ನಪ್ಪಿದ್ದಾಳೆ.‌

ಅಂದಹಾಗೆ ರವಿ ತನ್ನ ಮಡದಿ ಶಾಲಿನಿ ಹಾಗೂ ತನ್ಜ ಅಣ್ಣನ ಮಗನ ಜೊತೆ ಹೊಸನಗರ ತಾಲೂಕಿ ಗಡಿ ಗ್ರಾಮವಾದ ಹುಲಿಕಲ್​ನಲ್ಲಿ ನರಸಿಂಹ ದೇವಸ್ಥಾನಲ್ಲಿ ದೀಪೋತ್ಸವದಲ್ಲಿ ಭಾಗಿಯಾಗಿ ವಾಪಸ್ ಆಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ವೇಳೆ ರವಿ ಹಾಗೂ ಆತನ ಅಣ್ಣನ ಮಗ ಸ್ಥಳದಲ್ಲಿಯೇ ಸಾವನ್ನಪ್ಲಿದರೆ, ರವಿ ಮಡದಿ ಶಾಲಿನಿ ಕಾಲು ತುಂಡಾಗಿತ್ತು.

ತಕ್ಷಣ ಶಾಲಿನಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಹೆಚ್ಚಿನ ಚಿಕಿತ್ಸೆಗೆ ಚಂದ್ರಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಾಲಿನಿ ಸಹ ಸಾವನ್ನಪ್ಪಿದ್ದಾರೆ. ಇದರಿಂದ ರವಿ ಹಾಗೂ ಶಾಲಿನಿ ದಂಪತಿಗಳ ಮಕ್ಕಳಾದ ಅಶ್ವಲ್ ಹಾಗೂ ಅನೂಪ್ ಈಗ ಅನಾಥರಾಗಿದ್ದಾರೆ.

ಇಂದಿರಾ ಕುಟುಂಬದಲ್ಲಿ ಘೋರ‌ ಅನ್ಯಾಯ:ಇಂದಿರಾ ಎಂಬ ಮಹಿಳೆ ಈ ಅಪಘಾತದಿಂದ ಸಂಪೂರ್ಣವಾಗಿ ಬೀದಿ ಪಾಲಾಗಿದ್ದಾರೆ‌. ಇಂದಿರಾ ರವಿಯ ಅಣ್ಣನ ಮಡದಿಯಾಗಿದ್ದು ಇವರೂ ಅನಾಥೆಯಾಗಿದ್ದಾರೆ. ಅಪಘಾತದಲ್ಲಿ ಇವರ ಮಗ ಸಾನ್ನಪ್ಪಿದ್ದಾನೆ. ಕಳೆದ ಮೂರು ವರ್ಷದ ಹಿಂದೆ ಈಕೆಯ ಗಂಡ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.

ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗುವಿತ್ತು. ಒಂದು ವರ್ಷದ ಹಿಂದೆ ಇಂದಿರಮ್ಮ ಮಗಳನ್ನು ತೊಟ್ಟಿಲಲ್ಲಿ ಬಿಟ್ಟು ಮನೆ ಕೆಲಸ ಮಾಡುವಾಗ ಮಗಳು ಜೋಕಾಲಿಯ ಸೀರೆಗೆ ತನ್ನ ಕೊರಳನ್ನು ಸಿಲುಕಿಸಿಕೊಂಡು ಸಾವನ್ನಪ್ಪಿದ್ದರು. ಮೊನ್ನೆ ನಡೆದ ಅಪಘಾತದಲ್ಲಿ‌ ಜೀವನಕ್ಕೆ ಆಸರೆಯಾಗುತ್ತಾನೆ ಎಂದು ತಿಳಿದಿದ್ದ ಮಗ ಸಹ ಸಾವನ್ನಪ್ಪಿದ್ದು, ಇಂದಿರಮ್ಮ ಈಗ ಅಕ್ಷರ ಸಹ ಅನಾಥವಾಗಿದ್ದಾಳೆ.‌

ಗೃಹ‌ ಸಚಿವರಿಂದ ಆಸ್ಪತ್ರೆ ಹಣ ವಾಪಸ್:ಅಪಘಾತದಲ್ಲಿ‌ ಕಳೆದು‌ಕೊಂಡಿದ್ದ ಶಾಲಿನಿ‌ಯನ್ನು ಶಿವಮೊಗ್ಗ ಚಂದ್ರಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಶಾಲಿನಿ ಚಿಕಿತ್ಸೆಯ ಬಿಲ್​ 1.70 ಲಕ್ಷ ರೂ ಆಗಿದೆ. ಈ ವಿಷಯ‌ನ್ನು ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆಸ್ಪತ್ರೆಗೆ ಕರೆ ಮಾಡಿ‌ ಕಟ್ಟಿದ್ದ ಹಣವನ್ನು ವಾಪಸ್ ಕೊಡಿಸಿದ್ದಾರೆ.

ಇದನ್ನೂ ಓದಿ :ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಟ್ರ್ಯಾಕ್ಟರ್ ಟ್ರ್ಯಾಲಿ ತಗುಲಿ ಸವಾರ ಸಾವು- ಸಿಸಿಟಿವಿ ವಿಡಿಯೋ

ABOUT THE AUTHOR

...view details