ಶಿವಮೊಗ್ಗ: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಜಿಲ್ಲೆಯ ಖ್ಯಾತ ಖೋ ಖೋ ಆಟಗಾರ ನವೀನ್ (29) ಮೃತಪಟ್ಟಿದ್ದಾರೆ.
ನಗರದ ದ್ರೌಪದಮ್ಮ ವೃತ್ತದ ಬಳಿ ಸೋಮವಾರ ತಡರಾತ್ರಿ ಈ ಅಪಘಾತ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದ ಆಶೋಕ ನಗರದ ನಿವಾಸಿಯಾಗಿದ್ದ ನವೀನ್ 10 ಕ್ಕೂ ಹೆಚ್ಚು ಬಾರಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.