ಕರ್ನಾಟಕ

karnataka

ETV Bharat / state

ಬೈಕ್​ಗೆ ವಾಹನ‌ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು - ಶಿವಮೊಗ್ಗದಲ್ಲಿ ಬೈಕ್​ಗೆ ವಾಹನ‌ ಡಿಕ್ಕಿ

ಬೈಕ್​ಗೆ ವಾಹನ‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ಜರುಗಿದೆ.

ಶಿವಮೊಗ್ಗದಲ್ಲಿ ಬೈಕ್​ಗೆ ವಾಹನ‌ ಡಿಕ್ಕಿ, Bike accident in Shimogga
ಬೈಕ್​ಗೆ ವಾಹನ‌ ಡಿಕ್ಕಿ

By

Published : Dec 6, 2019, 11:28 PM IST

ಶಿವಮೊಗ್ಗ: ಬೈಕ್​ಗೆ ವಾಹನ‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ಜರುಗಿದೆ.

ಸೊರಬ ರಸ್ತೆಯ ನೆಹರು ಸ್ಟೇಡಿಯಂ ಬಳಿ ನಡೆದ ಅಪಘಾತದಲ್ಲಿ ಬೈಕ್​ ಸವಾರ ನಿಂಗರಾಜ್ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿಂಗರಾಜ್ ಸೊರಬ ತಾಲೂಕು ಸುತ್ತು ಕೋಟೆಯ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಇನ್ನೊಂದು ವಾಹನದ ಚಾಲಕ ಪರಾರಿಯಾಗಿದ್ದಾನೆ.

ಈ ಕುರಿತು ಶಿರಾಳಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ವಾಹನ ಮತ್ತು ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ABOUT THE AUTHOR

...view details