ಕರ್ನಾಟಕ

karnataka

ETV Bharat / state

ಭದ್ರಾವತಿ ಕೊಲೆ ಪ್ರಕರಣ: ಐವರ ಬಂಧನ - Bhadravati murder case

ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ, ನಿಶಾದ್ ಪಾಷಾ ತನ್ನ ಸ್ನೇಹಿತರನ್ನು ಕರೆಸಿಕೊಂಡು ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ. ಸುನೀಲ್​​ನನ್ನು ಬಿಡಿಸಲು ಬಂದ ಶ್ರೀಕಂಠನಿಗೊ ಚಾಕುವಿನಿಂದ ಗಾಯಗೊಳಿಸಿದ್ದಾರೆ. ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸುನೀಲ್ ಮೃತ ಪಟ್ಟಿದ್ದಾನೆ.

ಬಂಧನ
ಬಂಧನ

By

Published : May 26, 2021, 9:57 PM IST

ಶಿವಮೊಗ್ಗ: ಭದ್ರಾವತಿಯಲ್ಲಿ ನಿನ್ನೆ ಸಂಜೆ ನಡೆದ ಸುನೀಲ್ ಎಂಬಾತನ ಕೊಲೆ ಪ್ರಕರಣ ಸಂಬಂಧ 24 ಗಂಟೆ ಒಳಗೆ ಭದ್ರಾವತಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಸಾಬೀತ್(20), ಇದಾಯತ್(20), ನಿಶಾದ್(21), ಮಹಮದ್ ಜುನೇರ್​(20) ಹಾಗೂ ತಬ್ರೇಜ್ ಪಾಷಾ(21) ಬಂಧಿತ ಆರೋಪಿಗಳು. ನಿನ್ನೆ ಸಂಜೆ ಅನ್ವರ್ ಕಾಲೋನಿಯಿಂದ ಜೈ ಭೀಮ್ ನಗರಕ್ಕೆ ನಿಶಾದ್ ಪಾಷಾ ಮತ್ತು ಮಹಮದ್ ಜುನೇರ್ ಗುಟ್ಕಾಗಾಗಿ ಬಂದಿದ್ದಾರೆ. ಈ ವೇಳೆ ಜೈ ಭೀಮ್ ನಗರದ ಶ್ರೀಕಂಠ, ಸುನೀಲ್ ಹಾಗೂ ರಹೀಂ ತಮ್ಮ ಮನೆ ಬಳಿ ನಿಂತಿದ್ದರು. ಸುನೀಲ್ ನಮ್ ಏರಿಯಾಕ್ಕೆ ಯಾಕೆ ಬಂದಿದ್ದೀರಿ, ಲಾಕ್​ಡೌನ್ ಇದೆ ಎಂದು ಹೇಳಿದ್ದಾರೆ.

ಐವರ ಬಂಧನ

ಇದಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ನಿಶಾದ್ ಪಾಷಾ ತನ್ನ ಸ್ನೇಹಿತರನ್ನು ಕರೆಸಿಕೊಂಡು ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ. ಸುನೀಲನನ್ನು ಬಿಡಿಸಲು ಬಂದ ಶ್ರೀಕಂಠನಿಗೊ ಚಾಕುವಿನಿಂದ ಗಾಯಗೊಳಿಸಿದ್ದಾರೆ. ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸುನೀಲ್ ಮೃತ ಪಟ್ಟಿದ್ದಾನೆ.

ABOUT THE AUTHOR

...view details