ಶಿವಮೊಗ್ಗ: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ಮನೆಯನ್ನು ಇಂದು ಸೀಲ್ಡೌನ್ ಮಾಡಲಾಯಿತು. ಹೊಸಮನೆ ಬಡಾವಣೆಯಲ್ಲಿನ ಸಂಗಮೇಶ್ ಅವರ ಮನೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ನಗರಸಭೆಯು ಅದನ್ನು ಸೀಲ್ಡೌನ್ ಮಾಡಿತು.
ಭದ್ರಾವತಿ ಶಾಸಕ ಸಂಗಮೇಶ್ ಮನೆ ಸೀಲ್ಡೌನ್ - Shivamogga latest news
ಅಡುಗೆ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಶಾಸಕ ಬಿ.ಕೆ. ಸಂಗಮೇಶ್ ಅವರ ಮನೆಯನ್ನು ನಗರಸಭೆಯು ಸೀಲ್ಡೌನ್ ಮಾಡಿದೆ.

ಭದ್ರಾವತಿ ಶಾಸಕ ಸಂಗಮೇಶ್ ಮನೆ ಸೀಲ್ಡೌನ್
ಶಾಸಕ ಸಂಗಮೇಶ್ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮನೆಯನ್ನು ಸೀಲ್ಡೌನ್ ಮಾಡಲಾಯಿತು. ಅದೇ ರೀತಿ ಸಂಗಮೇಶ್ ಸಹೋದರ ಬಿ.ಕೆ.ಮೋಹನ್ ಅವರ ಮನೆಯನ್ನು ಸಹ ಸೀಲ್ಡೌನ್ ಮಾಡಲಾಗಿದೆ.
ಶಾಸಕ ಸಂಗಮೇಶ್ ಹಾಗೂ ಮೋಹನ್ ಅವರ ಮನೆಯವರಿಗೆ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿದೆ. ಈಗಾಗಲೇ ಅವರ ಮನೆ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ.