ಶಿವಮೊಗ್ಗ:ಡಿಸೆಂಬರ್ 1 ರಿಂದ 4 ರವರೆಗೆ ಕಠ್ಮಂಡುವಿನಲ್ಲಿ ನಡೆಯಲಿರುವ 13ನೇ ಸೌಥ್ ಏಷ್ಯನ್ ಒಲಿಂಪಿಕ್ ಖೋ ಖೋ ಕ್ರೀಡಾ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆ, ಭದ್ರಾವತಿ ಯ ಸರ್ ಎಂ ವಿಶ್ವೇಶ್ವರಯ್ಯ ಯೂತ್ ಸ್ಪೋರ್ಟ್ಸ್ ಕ್ಲಬ್ನ ಮುನೀರ್ ಭಾಷಾ ಭಾರತ ಖೋ ಖೋ ತಂಡದ ಉಪನಾಯಕರಾಗಿ ಭಾಗವಹಿಸುತ್ತಿದ್ದಾರೆ.
ಸೌಥ್ ಏಷ್ಯನ್ ಒಲಿಂಪಿಕ್ಗೆ ಭದ್ರಾವತಿಯ 'ಭಾಷಾ': ಕೋಚ್ ಹರ್ಷ
ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷ್ಯನ್ ಒಲಿಂಪಿಕ್ ನಲ್ಲಿ ಭದ್ರಾವತಿಯ ಭಾಷಾ ಆಯ್ಕೆಯಾಗಿದ್ದು, ಖೋ ಖೋ ತಂಡದ ಉಪನಾಯಕರಾಗಿದ್ದಾರೆ.
ಸೌಥ್ ಏಷ್ಯನ್ ಒಲಿಂಪಿಕ್ ನಲ್ಲಿ ಭದ್ರಾವತಿಯ 'ಭಾಷಾ'
ಈ ಬಗ್ಗೆ ಭಾಷಾ ಕೋಚ್ ಮಾತನಾಡಿ, ಭಾರತ ತಂಡದ ಉಪನಾಯಕರಾಗಿ ಭದ್ರಾವತಿ ಕ್ರೀಡಾ ಪಟು ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಕಠ್ಮಂಡುವಿನಲ್ಲಿ ನಡೆಯುವ ಸೌಥ್ ಏಷ್ಯನ್ ಒಲಿಂಪಿಕ್ ಖೋ ಖೋ ಕ್ರೀಡೆಯಲ್ಲಿ ಗೆದ್ದು ಬರಲಿ ಎಂದು ಶುಭ ಹಾರೈಸಿದರು.
ಅಮೀರ್ ಬಾಷಾ ಅವರು ಹಮಾಲಿ ಮಾಡುವ ಬಡ ಕುಟುಂಬದಲ್ಲಿ ಹುಟ್ಟಿ, ಕ್ರೀಡೆಯಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಇವರ ಕ್ರೀಡಾ ಸಾಧನೆ ಗುರುತಿಸಿ ಏಕಲವ್ಯ ಪ್ರಶಸ್ತಿ ನೀಡಬೇಕು ಹಾಗೂ ಸರ್ಕಾರಿ ನೌಕರಿ ಸಹ ನೀಡುವ ಮೂಲಕ ಅವರ ಕ್ರೀಡಾ ಸಾಧನೆಗೆ ಸರ್ಕಾರ ಗೌರವ ನೀಡಬೇಕು ಎಂದು ಒತ್ತಾಯಿಸಿದರು.