ಶಿವಮೊಗ್ಗ: ಭದ್ರಾ ನದಿ ಉಕ್ಕಿ ಹರಿಯುತ್ತಿದ್ಧು, ಭದ್ರಾ ಅಣೆಕಟ್ಟೆಯಿಂದ 55 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಭದ್ರಾವತಿಯ ಮೂರು ಬಡಾವಣೆಗಳಿಗೆ ನೀರು ನುಗ್ಗಿದೆ.
ಭದ್ರಾವತಿಯ 3 ಬಡಾವಣೆಗಳಿಗೆ ನುಗ್ಗಿದ ಭದ್ರೆ: ಪರಿಹಾರ ಕೇಂದ್ರಕ್ಕೆ ಜನರ ಸ್ಥಳಾಂತರ - ಕಾಳಜಿ ಕೇಂದ್ರ ಸ್ಥಾಪನೆ
ಭದ್ರಾ ಅಣೆಕಟ್ಟೆಯಿಂದ 55 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಭದ್ರಾವತಿಯ ಕವಲಗುಂದಿ, ಅಂಬೇಡ್ಕರ್ ನಗರ ಹಾಗೂ ಗುಂಡೂರಾವ್ ಬಡಾವಣೆಗೆಗಳಿಗೆ ನೀರು ನುಗ್ಗಿದೆ.
ಭದ್ರಾವತಿಯ 3 ಬಡಾವಣೆಗಳಿಗೆ ನುಗ್ಗಿದ ಭದ್ರೆ..
ಭದ್ರಾವತಿಯ ಕವಲಗುಂದಿ, ಅಂಬೇಡ್ಕರ್ ನಗರ ಹಾಗೂ ಗುಂಡೂರಾವ್ ಬಡಾವಣೆಗೆ ನೀರು ನುಗ್ಗಿದ್ದು, ಇಲ್ಲಿನ ಜನರನ್ನು ಭದ್ರಾವತಿಯ ಒಕ್ಕಲಿಗರ ಸಭಾ ಭವನಕ್ಕೆ ರವಾನೆ ಮಾಡಲಾಗಿದೆ.
ಇಲ್ಲಿ ತಾಲೂಕು ಆಡಳಿತ ಪರಿಹಾರ ಕೇಂದ್ರ ತೆರೆದಿದೆ. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಪ್ರಕಾಶ್ ಹಾಗೂ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.