ಕರ್ನಾಟಕ

karnataka

ETV Bharat / state

ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷೆಯಾಗಿ ಪವಿತ್ರ ರಾಮಯ್ಯ ನೇಮಕ - Bhadra kada project

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯಾಗಿ ಪ್ರಥಮ ಬಾರಿಗೆ ಮಹಿಳೆ ಆಯ್ಕೆಯಾಗಿದ್ದಾರೆ. ಬಿಜೆಪಿಯ ಪವಿತ್ರ ರಾಮಯ್ಯ ನೇಮಕಗೊಂಡಿದ್ದಾರೆ.

Bhadra Kada Authority president  pavitra R
ಧಿಕಾರದ ಅಧ್ಯಕ್ಷೆಯಾದ ಪವಿತ್ರ ರಾಮಯ್ಯ

By

Published : Sep 16, 2020, 9:00 PM IST

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಬಿಜೆಪಿಯ ಪವಿತ್ರ ರಾಮಯ್ಯ ನೇಮಕವಾಗಿದ್ದಾರೆ.

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಜೀವನಾಡಿಯಾದ ಭದ್ರಾ ನದಿಯ ನೀರು ಹಂಚಿಕೆ, ಅಚ್ಚುಕಟ್ಟು‌ ಪ್ರದೇಶದ ಅಭಿವೃದ್ದಿಯ ದೃಷ್ಟಿಯಿಂದ ಕಾಡಾ ಸ್ಥಾಪಿಸಲಾಗಿದೆ.

ಕಾಡಾದಲ್ಲಿ ಪ್ರತಿ ವರ್ಷ ಭದ್ರಾ ಅಣೆಕಟ್ಟೆಯ ನೀರು ನಿರ್ವಹಣೆ, ನೀರು ಹಂಚಿಕೆ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗೆ ನೀರು ಬಿಡುಗಡೆಯ ಕುರಿತು ಕಾಡಾದಲ್ಲಿ‌ ನಿರ್ಧಾರ ಕೈಗೊಳ್ಳಲಾಗುವುದು. ಕಾಡಾ ಅಧ್ಯಕ್ಷರ ನೇಮಕದ ಜೊತೆಗೆ ಸದಸ್ಯರನ್ನು ನೇಮಕ‌ ಮಾಡಲಾಗುತ್ತಿದೆ.

ಪವಿತ್ರ ರಾಮಯ್ಯ ಕಾಡಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದು, ಹಿಂದೆ ಇವರು ಜೆಡಿಎಸ್‌ನಲ್ಲಿದ್ದು, ನಂತರ ಬಿಜೆಪಿಗೆ‌ ಸೇರ್ಪಡೆಯಾಗಿದ್ದರು. ಕಾಡಾ‌ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆಯೇ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸೇರಿದಂತೆ ಹಿರಿಯ ಬಿಜೆಪಿ‌ ಮುಖಂಡರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದು ಕೊಂಡರು.

ABOUT THE AUTHOR

...view details