ಶಿವಮೊಗ್ಗ :ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೀರೆ ಉಟ್ಟುಕೊಂಡ್ರೆ, ಗಂಡೋ -ಹೆಣ್ಣೋ ಎಂದು ತಿಳಿಯುದಿಲ್ಲ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿಗೆ ಬೆಂಕಿ ಹಚ್ಚಲು ಹೋದವರು. ಅವರು ಸೀರೆ ಉಟ್ಟುಕೊಂಡ್ರೆ, ಗಂಡೋ- ಹೆಣ್ಣೋ ತಿಳಿಯುವುದಿಲ್ಲ. ಕಟೀಲ್ ಅವರು ತಮ್ಮ ಪಕ್ಷದ ಹುಳುಕನ್ನು ತಾವು ಮುಚ್ಚಿಕೊಂಡ್ರೆ ಸಾಕು, ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮುಸ್ಲಿಂರ ವೋಟಿಗಾಗಿ ಹೆಚ್ಡಿಕೆ RSS ಬೈತಾರೆ : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇವಲ ಮತಕ್ಕಾಗಿ ಆರ್ಎಸ್ಎಸ್ಗೆ ಬೈಯ್ಯುತ್ತಿದ್ದಾರೆ. ಸಂಘವನ್ನು ಬೈಯ್ದರೆ ಜೆಡಿಎಸ್‌ಗೆ ವೋಟ್ ಬರುತ್ತೆ ಅಂತಾ ಹೀಗೆ ಮಾಡುತ್ತಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ಸಂಘ ಪರಿವಾರವನ್ನು ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದಾರೆ ಅಷ್ಟೇ ಎಂದರು. ಈಶ್ವರಪ್ಪನವರಿಗೆ ನಾನು ಬೈಯ್ಯುವುದಿಲ್ಲ. ಅವರಿಗೆ ನಾನು ಬೈಯ್ದರೆ ತಡೆದುಕೊಳ್ಳುವುದಿಲ್ಲ. ಇದರಿಂದ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದರು.
ಕಾಂಗ್ರೆಸ್ ಇರೋದಿಲ್ಲ ಎನ್ನುವವರೇ ಮುಂದೆ ಬಿಜೆಪಿಯಲ್ಲಿ ಇರಲ್ಲ :ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಇರೋದಿಲ್ಲ ಎಂದು ಹೇಳುವ ಬಿಜೆಪಿಯ ವಿಜಯೇಂದ್ರ, ರವಿಕುಮಾರ್ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದರು.