ಕರ್ನಾಟಕ

karnataka

ETV Bharat / state

ಈಶ್ವರಪ್ಪ ಅವರ ಹಾಳು ಬಾಯಿಯಿಂದ ಜಿಲ್ಲೆಯ ಶಾಂತಿ ಕದಡಿದೆ: ಗೋಪಾಲಕೃಷ್ಣ ಬೇಳೂರು - ಈಟಿವಿ ಭಾರತ್​ ಕರ್ನಾಟಕ

ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್​ನವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಈಶ್ವರಪ್ಪ ಸಿದ್ಧರಾಮಯ್ಯ ಅವರ ಮೇಲೆ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನ್ನು ಟೀಕೆ ಮಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು.

belur-gopalakrishna
ಗೋಪಾಲಕೃಷ್ಣ ಬೇಳೂರು

By

Published : Aug 30, 2022, 10:31 AM IST

ಶಿವಮೊಗ್ಗ:ಶಾಸಕ ಕೆ.ಎಸ್. ಈಶ್ವರಪ್ಪ ಅವರ ಹಾಳು ಬಾಯಿಯಿಂದ ಜಿಲ್ಲೆಯ ಶಾಂತಿ ಕದಡಿದೆ. ಅವರು ಬಳಸುವ ಕೆಟ್ಟ ಪದಗಳು, ಆರೋಗ್ಯಕರವಲ್ಲದ ಟೀಕೆಗಳಿಂದ ಇಡೀ ವ್ಯವಸ್ಥೆಯೇ ಕದಡಿ ಹೋಗಿದೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಅತಂತ್ರ ಪರಿಸ್ಥಿತಿ ಉಂಟಾಗಿದೆ. ಹಿಂದೂಗಳನ್ನು ಉಳಿಸಿಕೊಳ್ಳಲು ಈ ಬಿಜೆಪಿ ಸರ್ಕಾರಕ್ಕೆ ತಾಕತ್ ಇಲ್ಲ. ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್​ನವರ ಮೇಲೆ ವಿನಾಕರಾಣ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಈಶ್ವರಪ್ಪ ಸಿದ್ಧರಾಮಯ್ಯ ಮೇಲೆ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಟೀಕೆ ಮಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ ಎಂದರು.

ಈಶ್ವರಪ್ಪ ಅವರ ಹಾಳು ಬಾಯಿಯಿಂದ ಜಿಲ್ಲೆಯ ಶಾಂತಿ ಕದಡಿದೆ

ಡಿಜೆಗೆ ಅವಕಾಶ ಕೋಡಿ: ಗಣೇಶೋತ್ಸವ ಎರಡು ವರ್ಷಗಳ ನಂತರ ವಿಜೃಂಭಣೆಯಿಂದ ನಡೆಯುತ್ತಿರುವ ಕಾರಣ ಜಿಲ್ಲಾಡಳಿತ ಮತ್ತು ಸರ್ಕಾರ ಗಣೇಶ ಹಬ್ಬಕ್ಕೆ ಡಿಜೆಗೆ ಅವಕಾಶ ನೀಡಿಬೇಕು ಎಂದು ಒತ್ತಾಯಿಸಿದರು.

ಹರತಾಳು ಹಾಲಪ್ಪನಿಂದ ಧ್ವಜಕ್ಕೆ ಮೈಲಿಗೆ :ಸಾಗರದ ಕಳಂಕಿತ ಶಾಸಕ ಹರತಾಳು ಹಾಲಪ್ಪ ಅವರಿಂದ ಧ್ವಜ ಮೈಲಿಗೆಯಾಗಿದೆ ಎಂದು ನೇರ ಆರೋಪ ಮಾಡಿದ ಅವರು, ಈತ 70 ಸಾವಿರ ಧ್ವಜ ಹಂಚಿರುವುದಾಗಿ ಹೇಳುತ್ತಾರೆ. ಇವರು ಗ್ರಾಮ ಪಂಚಾಯಿತಿಗಳ ಮೂಲಕ ಒಂದು ಧ್ವಜಕ್ಕೆ 20 ರೂ. ನಂತೆ ವಸೂಲಿ ಮಾಡಿದ್ದಾರೆ. ಅಷ್ಟಕ್ಕೂ ಈತ ಶುದ್ಧನೇನೂ ಅಲ್ಲ. ಈತನಿಂದ ಧ್ವಜ ಮೈಲಿಗೆಯಾಗಿದೆ ಎಂದರು.

ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾವರ್ಕರ್ ಫೋಟೋ ಕುರಿತು ಮಾತನಾಡುತ್ತಾರೆ. ಅವರ ಫೋಟೋ ಇಡದವರನ್ನು ಜೈಲಿಗೆ ಹಾಕಬೇಕು ಎನ್ನುತ್ತಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ನೆಹರು ಫೋಟೋ ಹಾಕಿಲ್ಲವಲ್ಲ, ಶೋಭಾ ಮೇಡಂ ಅವರನ್ನು ತಿಹಾರ್ ಜೈಲಿಗೆ ಹಾಕಬೇಕಲ್ಲವೇ ಎಂದು ಪ್ರಶ್ನಿಸಿದ ಅವರು ಗಾಂಧಿಜಿ ಅವರನ್ನು ಕೊಂದ ಗೋಡ್ಸೆಗೆ ದೇವರ ಗುಡಿ ಕಟ್ಟುವವರು ಹೇಗೆ ರಾಷ್ಟ್ರ ಭಕ್ತರಾಗುತ್ತಾರೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಆರ್. ರಾಜಶೇಖರ್, ಸಿ.ಎಸ್. ಚಂದ್ರಭೂಪಾಲ್, ಕೆ. ರಂಗನಾಥ್, ರಾಜಕುಮಾರ್, ಚಿನ್ಮಯ್ ಇದ್ದರು.

ಇದನ್ನೂ ಓದಿ :ಯಡಿಯೂರಪ್ಪ ಅವರ ಆಸೆ ಈಡೇರುತ್ತೆ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ABOUT THE AUTHOR

...view details