ಕರ್ನಾಟಕ

karnataka

ETV Bharat / state

ಶಿವಮೊಗ್ಗ... ದನ ಕಾಯಲು ಹೋದವನ ಮೇಲೆ ಕರಡಿ ದಾಳಿ - ಶಿವಮೊಗ್ಗದಲ್ಲಿ ಕರಡಿ ದಾಳಿ

ದನ ಕಾಯಲು ಹೋದವನ ಮೇಲೆ ಕರಡಿ ದಾಳಿ ನಡೆಸಿದ ಹಿನ್ನೆಲೆ ಆತನ ಕಣ್ಣುಗಳಿಗೆ ಗಾಯವಾಗಿದೆ.

bear-attack
ದನ ಕಾಯಲು ಹೋದವನ ಮೇಲೆ ಕರಡಿ ದಾಳಿ

By

Published : Nov 4, 2020, 5:09 AM IST

ಶಿವಮೊಗ್ಗ: ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಜಪ್ಪ ಚಿಕಿತ್ಸೆ ಪಡೆಯುತ್ತಿರುವಾತ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗೋಪ್ಪೆನಹಳ್ಳಿ ಬಳಿಯ ಹನುಮಂತಪುರ ಗ್ರಾಮದ‌ ನಿವಾಸಿ.‌ ಮಂಜಪ್ಪ ಮಂಗಳವಾರ ದನ ಕಾಯಲು ಹೋದಾಗ ಕರಡಿ ಹಿಂಬದಿಯಿಂದ ಏಕಾಏಕಿ ದಾಳಿ ನಡೆಸಿದೆ.

ಕರಡಿ ದಾಳಿಯಿಂದ ಮಂಜಪ್ಪನ‌ ಎರಡು ಕಣ್ಣುಗಳಿಗೆ ಹಾನಿಯಾಗಿದೆ. ತಕ್ಷಣ ಮಂಜಪ್ಪ‌ ಜೋರಾಗಿ ಕೂಗಿಕೊಂಡಿದ್ದಾರೆ. ಜನ ಬರುತ್ತಿದ್ದಂತೆಯೇ ಕರಡಿ ಪರಾರಿಯಾಗಿದೆ. ಚನ್ನಗಿರಿ ಆಸ್ಪತ್ರೆಗೆ ದಾಖಲು ಮಾಡಿ,‌ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆದು ಕೊಂಡು ಬರಲಾಗಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷ ಆನೆ ದಾಳಿಗೆ ಇದೇ ಗ್ರಾಮದ‌ ಓರ್ವ ವ್ಯಕ್ತಿ‌ ಸಾವನ್ನಪ್ಪಿದ್ದರು.

ABOUT THE AUTHOR

...view details