ಶಿವಮೊಗ್ಗ : ರೈತ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಕರೆ ನೀಡಿರುವ ನಾಳೆಯ ಕರ್ನಾಟಕ ಬಂದ್‌ಗೆ ಶಿವಮೊಗ್ಗ ಜಿಲ್ಲೆಯ ಜನರು ಬೆಂಬಲಿಸಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಮನವಿ ಮಾಡಿಕೊಂಡಿದ್ದಾರೆ.
ನಾಳೆ ಬಂದ್‌ಗೆ ಸಾರ್ವಜನಿಕರು ಬೆಂಬಲ ಸೂಚಿಸಿ.. ರೈತ ಮುಖಂಡ ಹೆಚ್ ಆರ್ ಬಸವರಾಜಪ್ಪ ಮನವಿ - ಶಿವಮೊಗ್ಗ ಸುದ್ದಿ
ಈಗಾಗಲೇ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಜನಶಕ್ತಿ ಪಕ್ಷ, ಎಸ್‌ಡಿಪಿಐ ಪಕ್ಷ, ಜಿಲ್ಲಾ ಕಾಂಗ್ರೆಸ್, ಜೆಡಿಎಸ್, ಸೇರಿ ವಿವಿಧ ಸಂಘಟನೆಗಳು ಬೆಂಬಲಿಸಿವೆ. ಹಾಗಾಗಿ, ನಾಳೆಯ ಬಂದ್‌ಗೆ ಎಲ್ಲರೂ ಸಹಕರಿಸಿ ರೈತರಿಗಾಗಿ ಬಂದ್ ಮಾಡಿ ಎಂದು ಮನವಿ..
ಭೂ ಸುಧಾರಣಾ, ಎಪಿಎಂಸಿ, ವಿದುಚ್ಛಕ್ತಿಯಂತೆ ತಿದ್ದುಪಡಿ ಕಾಯ್ದೆಗಳು ರೈತ, ಜನ ವಿರೋಧಿಯಾಗಿವೆ. ಈ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಹಾಗಾಗಿ, ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು ಸಹ ನಾಳೆ ಬಂದ್‌ಗೆ ಬೆಂಬಲ ನೀಡುವ ಮೂಲಕ ಕರ್ನಾಟಕ ಬಂದ್ ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಜನಶಕ್ತಿ ಪಕ್ಷ, ಎಸ್‌ಡಿಪಿಐ ಪಕ್ಷ, ಜಿಲ್ಲಾ ಕಾಂಗ್ರೆಸ್, ಜೆಡಿಎಸ್, ಸೇರಿ ವಿವಿಧ ಸಂಘಟನೆಗಳು ಬೆಂಬಲಿಸಿವೆ. ಹಾಗಾಗಿ, ನಾಳೆಯ ಬಂದ್‌ಗೆ ಎಲ್ಲರೂ ಸಹಕರಿಸಿ ರೈತರಿಗಾಗಿ ಬಂದ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾಳೆ ಕರ್ನಾಟಕ ಬಂದ್‌ಗೆ ಶಿವಮೊಗ್ಗದಲ್ಲೂ ಸಹ ಉತ್ತಮ ಬೆಂಬಲ ಸಿಗುವ ಸಾಧ್ಯತೆಗಳಿವೆ.