ಶಿವಮೊಗ್ಗ :ಬಡವರ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡವರ ವಿರುದ್ಧ ಹಾಗೂ ಈ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ್ ವಿದ್ಯಾರ್ಥಿ ಸಂಘ ಹಾಗೂ ಹೊಸಕೊಪ್ಪ, ತಟ್ಟೆಕೆರೆ ಗ್ರಾಮ ದಲಿತ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಲಾಯ್ತು.
ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಬರುವ ಹೊಸಕೊಪ್ಪ, ತಟ್ಟೆಕೆರೆ ಗ್ರಾಮದ ಸರ್ವೇ ನಂ 176ರಲ್ಲಿ 40.16 ಎಕರೆ ಭೂಮಿಯಲ್ಲಿ ಕಳೆದ 70 ವರ್ಷಗಳಿಂದ 25ಕ್ಕೂ ಹೆಚ್ಚು ದಲಿತ ಕುಟುಂಬಗಳು ಸರ್ಕಾರಿ ಖರಾಬು ಭೂಮಿಯಲ್ಲಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿವೆ. ಈ ಸಾಗುವಳಿ ಭೂಮಿಯನ್ನು ಬಗರ್ ಹುಕುಂ ಸಮಿತಿಯಿಂದ ಮಂಜೂರು ಮಾಡಿಕೊಡುವಂತೆ ಈಗಾಗಲೇ ಅರ್ಜಿ ಸಹ ಸಲ್ಲಿಸಿದ್ದಾರೆ.