ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದ ತುಂಗಾ ನದಿಯ ಪ್ರವಾಹಕ್ಕೆ ನಗರದ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿದ್ದವು.ಇದರಿಂದ ನೂರಾರು ಕುಟುಂಬಗಳು ಬೀದಿ ಪಲಾಗಿದ್ದವು. ಇಂತಹವರಿಗೆ ಬೆಂಗಳೂರಿಗರು ತಮ್ಮ ಕೈಲಾದಷ್ಟು ವಸ್ತುಗಳನ್ನು ಮಲೆನಾಡಿಗೆ ಕಳುಹಿಸುವ ಮೂಲಕ ಸಹಾಯ ಮಾಡಿದ್ದಾರೆ.
ತುಂಗಾ ನೆರೆ ಸಂತ್ರಸ್ತರಿಗೆ ಬೆಂಗಳೂರಿಗರಿಂದ ಸಹಾಯ - Tunga Flood victims
ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ನಗರದ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿದ್ದವು. ಈ ಪ್ರವಾಹದಿಂದ ಬೀದಿ ಪಲಾಗಿದ್ದ ಕುಟುಂಬಗಳಿಗೆ ಬೆಂಗಳೂರಿನ ಜನತೆ ವಸ್ತುಗಳನ್ನು ಕಳುಹಿಸುವ ಮೂಲಕ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.
ಈ ವಸ್ತುಗಳನ್ನು ಕರವೇ, ಕೆಂಪೇಗೌಡ ಯೂಥ್ ಫೌಂಡೇಷನ್ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ದಿನ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಶಿವಮೊಗ್ಗದ ವಿದ್ಯಾನಗರ, ರಾಜೀವ ಗಾಂಧಿ ಬಡಾವಣೆಗಳ ನಿವಾಸಿಗಳಿಗೆ ಬೆಂಗಳೂರಿನ ಜನ ನೀಡಿದ್ದ, ಬ್ರೆಡ್, ಬನ್, ಬಿಸ್ಕೆಟ್, ಬಟ್ಟೆ, ಚಾಪೆ, ಟೂತ್ ಬ್ರೆಶ್,ಸೋಪ್ ಸೇರಿದಂತೆ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ ಉಪ್ಪು ಸೇರಿದಂತೆ ಇತರೆ ವಸ್ತುಗಳನ್ನು ವಿತರಿಸಲಾಯಿತು.
ಬೆಂಗಳೂರಿಗರು ನೀಡಿದ ವಸ್ತುಗಳನ್ನು ಅರ್ಹ ನಿರಾಶ್ರಿತರಿಗೆ ತಲುಪಿಸಲು ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ಅಧ್ಯಕ್ಷ ಎನ್.ಮಂಜುನಾಥ್, ಜೇಸುದಾಸ್ ರವರ ಸಹಯೋಗದಲ್ಲಿ ವಿತರಣೆ ಮಾಡಲಾಯಿತು. ಈ ವೇಳೆ ನಿರಾಶ್ರಿತರಿಗೆ ಶಿವಮೊಗ್ಗ ಪ್ರೆಸ್ಟ್ ಸಹಯೋಗದಲ್ಲಿ ದಿನ ಬಳಕೆಯ ವಸ್ತುಗಳನ್ನು ನೀಡಲಾಯಿತು.