ಕರ್ನಾಟಕ

karnataka

ETV Bharat / state

ಸಚಿವ ಪ್ರಭು ಚವ್ಹಾಣ್ ಮೇಲೆ ಫೇಸ್​ಬುಕ್​​ ನಲ್ಲಿ ಜಾತಿ ನಿಂದನೆ : ದೂರು ದಾಖಲು - Bad comment on Minister Prabhu chawhan in facebook

ಫೇಸ್ ಬುಕ್ ನಲ್ಲಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಜಾತಿ ನಿಂದನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಂಜಾರಾ ವಿದ್ಯಾರ್ಥಿ ಸಂಘದ ಸದಸ್ಯರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

Shimoga
Shimoga

By

Published : Jul 20, 2020, 5:18 PM IST

Updated : Jul 21, 2020, 9:33 AM IST

ಶಿವಮೊಗ್ಗ:ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರಿಗೆ ಫೇಸ್​ಬುಕ್​ನಲ್ಲಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಸದಸ್ಯರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಸಚಿವ ಪ್ರಭು ಚವ್ಹಾಣ್ ಮೇಲೆ ಫೇಸ್​ಬುಕ್​​ ನಲ್ಲಿ ಜಾತಿ ನಿಂದನೆ
ಪ್ರಶಾಂತ್ ದರ್ಬಾರೆ ಎನ್ನುವವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಶುದ್ಧ ಕುಡಿಯುವ ನೀರಿನ ಘಟಕದ ಪೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಆ ಕುಡಿಯುವ ನೀರಿನ ಘಟಕದ ಮೇಲೆ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಭಾವಚಿತ್ರ ಸಹ ಇದೆ. ಹಾಗಾಗಿ ಸಚಿವರ ಪೋಟೋ ಕಂಡು ಸಾಗರ್ ಸಿಂಧೆ ಎನ್ನುವ ವ್ಯಕ್ತಿ ಕಮೆಂಟ್​ ಬಾಕ್ಸ್​​ನಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ.

ಇದರಿಂದ ಇಡೀ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಹಾಗಾಗಿ ಕೂಡಲೇ ಸಾಗರ್ ಸಿಂಧೆ ಎನ್ನುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Last Updated : Jul 21, 2020, 9:33 AM IST

ABOUT THE AUTHOR

...view details