ಶಿವಮೊಗ್ಗ: ಶಿವಮೊಗ್ಗಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ರಾಘವೇಂದ್ರ ಅವರ ತಮ್ಮ ವಿಜಯೇಂದ್ರ ನಗರದ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶುಭಕೋರಿದರು.
ಅಣ್ಣನ ಜನ್ಮದಿನಕ್ಕೆ ವಿಶೇಷ ಪೂಜೆ ಸಲ್ಲಿಸಿ ಶುಭಕೋರಿದ ತಮ್ಮ ಬಿ.ವೈ ವಿಜಯೇಂದ್ರ - Shivamogga latest News
ಇಂದು ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬbಿರುವ ಹಿನ್ನೆಲೆಯಲ್ಲಿ ಸಹೋದರ ವಿಜಯೇಂದ್ರ ನಗರದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
![ಅಣ್ಣನ ಜನ್ಮದಿನಕ್ಕೆ ವಿಶೇಷ ಪೂಜೆ ಸಲ್ಲಿಸಿ ಶುಭಕೋರಿದ ತಮ್ಮ ಬಿ.ವೈ ವಿಜಯೇಂದ್ರ shivamogga](https://etvbharatimages.akamaized.net/etvbharat/prod-images/768-512-12786954-thumbnail-3x2-kbl.jpg)
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ರಾಘವೇಂದ್ರ ಅವರು ನಡೆಯುತ್ತಿದ್ದಾರೆ. ಯಡಿಯೂರಪ್ಪ ಎಂದರೆ ಅಭಿವೃದ್ಧಿ ಎಂದು ಕರೆಯುತ್ತಿದ್ದರು ರಾಜ್ಯದ ಜನ. ಅದೇ ರೀತಿಯಲ್ಲಿ ರಾಘಣ್ಣ ಕೂಡ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಶಾಸಕರಾಗಿ, ಲೋಕಸಭಾ ಸದಸ್ಯರಾಗಿ ಯಡಿಯೂರಪ್ಪನವರ ಅಭಿವೃದ್ಧಿ ಮಂತ್ರವನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆ ಜೊತೆಗೆ ಒಂದು ರೀತಿಯಲ್ಲಿ ಆಧುನಿಕ ಭಗೀರಥ ಎಂದರೆ ತಪ್ಪಾಗಲಾರದು. ಆ ನಿಟ್ಟಿನಲ್ಲಿ ಕಾಳಜಿ ವಹಿಸಿ ಬೈಂದೂರು ಸೇರಿದಂತೆ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ಕುಟುಂಬದ ಪರವಾಗಿ ಹಾಗೂ ಕಾರ್ಯಕರ್ತರು, ಅಭಿಮಾನಿಗಳ ಪರವಾಗಿ ರಾಘಣ್ಣನಿಗೆ ಜನ್ಮದಿನದ ಶುಭ ಕೋರುತ್ತೇನೆ ಎಂದರು.