ಕರ್ನಾಟಕ

karnataka

ETV Bharat / state

ನಮ್ಮ ಮನೆಗೆ ಮುತ್ತಿಗೆ ಬದಲು ಕಾಂಗ್ರೆಸ್​ನವರು ತಮ್ಮ ನಾಯಕರ ಮನೆ ಮುಂದೆ ಸಂತಾಪ ಪಾದಯಾತ್ರೆ ಮಾಡಲಿ: ಬಿ. ವೈ. ರಾಘವೇಂದ್ರ - ಕಾಂಗ್ರೆಸ್​ ನಾಯಕರ ವಿರುದ್ದ ಬಿ ವೈ ರಾಘವೇಂದ್ರ ಆಕ್ರೋಶ

ಕಳೆದ ಎರಡು ವಾರಗಳಿಂದ ನಮ್ಮ ಮಲೆನಾಡು ಭಾಗದ ಸಮಸ್ಯೆಯಾದ ಬಗರ್ ಹುಕುಂ, ಅರಣ್ಯ ಹಕ್ಕು, ಮುಳುಗಡೆ ಸಂತ್ರಸ್ತರು ಈ ವಿಷಯದಲ್ಲಿ ಚರ್ಚೆಗಳು ಶುರುವಾಗಿದೆ ಎಂದು ಲೋಕಸಭಾ ಕ್ಷೇತ್ರ ಸಂಸದ ಬಿ. ವೈ ರಾಘವೇಂದ್ರ ತಿಳಿಸಿದ್ದಾರೆ.

B-y-ragavendra
ಸಂಸದ ಬಿ. ವೈ ರಾಘವೇಂದ್ರ ಮಾತನಾಡಿದರು

By

Published : Mar 3, 2022, 6:56 PM IST

Updated : Mar 3, 2022, 8:55 PM IST

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್​ ಮಾಜಿ ಅಧ್ಯಕ್ಷ ತಿ. ನಾ ಶ್ರೀನಿವಾಸ್ ಅವರು 'ಜಿಲ್ಲೆಯ ಕಾಂಗ್ರೆಸ್ ನಾಯಕರು ರೈತರ ಪರ ಹೋರಾಟವನ್ನು ಮರೆತ ಕಾರಣ ಅರಣ್ಯ ಇಲಾಖೆ ಶೋಷಣೆಗೆ ಇಳಿದಿದೆ' ಎಂದು ಟೀಕಿಸಿದ್ದಾರೆ. ಅವರು ನಿಜವನ್ನೇ ಹೇಳಿದ್ದಾರೆ. ಅವರಿಗೆ ಈಗ ಪಶ್ಚಾತಾಪವಾಗಿದೆ. ಹಾಗಾಗಿ, ಅವರು ನಮ್ಮ ಮನೆಯ ಮುಂದೆ ಹೋರಾಟ ಮಾಡುವ ಬದಲು ಕಾಂಗ್ರೆಸ್ ನಾಯಕರ ಮನೆಯ ಮುಂದೆ ಸಂತಾಪದ ಪಾದಯಾತ್ರೆ ಮಾಡಿಕೊಳ್ಳಲಿ ಎಂದು ಸಂಸದ ಬಿ. ವೈ ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಸಂಸದ ಬಿ. ವೈ ರಾಘವೇಂದ್ರ ಮಾತನಾಡಿದರು

ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವಾರಗಳಿಂದ ನಮ್ಮ ಮಲೆನಾಡು ಭಾಗದ ಸಮಸ್ಯೆಯಾದ ಬಗರ್ ಹುಕುಂ, ಅರಣ್ಯ ಹಕ್ಕು, ಮುಳುಗಡೆ ಸಂತ್ರಸ್ತರು ಈ ವಿಷಯದಲ್ಲಿ ಚರ್ಚೆಗಳು ಶುರುವಾಗಿವೆ.

ನಮ್ಮ ಪಕ್ಷದ ಮುಖಂಡರು, ನಾಯಕರ ನೇತೃತ್ವದಲ್ಲಿ ಸ್ಪಂದನೆಯ ಕೆಲಸಗಳು ಕೂಡ ನಡೆದಿವೆ. ಕಾಂಗ್ರೆಸ್ ಮುಖಂಡರಾದ ತಿ. ನಾ. ಶ್ರೀನಿವಾಸ್ ಒಂದು ಹೋರಾಟ ಸಮಿತಿ ಮಾಡಿಕೊಂಡು 7ನೇ ತಾರೀಖು ಶಿಕಾರಿಪುರದಲ್ಲಿ ಸಂಸದರ ಮನೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ‌. ಕೆಲವು ರೈತರು/ ಪರಿಸರವಾದಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇವತ್ತಿನ ನಮ್ಮ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಜೊತೆಗೆ ನ್ಯಾಯಾಲಯವು ಈ ವಿಷಯದಲ್ಲಿ ಉಳಿದ ಅರ್ಜಿಯನ್ನು ವಿಲೇವಾರಿ ಮಾಡಲು ಸಮಯವನ್ನು ಹೆಚ್ಚು ನೀಡಬೇಕೆಂದು ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.

ಓದಿ:ಬಿ.ಕೆ.ಹರಿಪ್ರಸಾದ್, ಸಿಎಂ ಇಬ್ರಾಹಿಂ ನೇರ ಚುನಾವಣೆಯಲ್ಲಿ ಗೆದ್ದು ಬರಲಿ: ಈಶ್ವರಪ್ಪ ಸವಾಲು​

Last Updated : Mar 3, 2022, 8:55 PM IST

For All Latest Updates

TAGGED:

ABOUT THE AUTHOR

...view details