ಶಿವಮೊಗ್ಗ: ಪಕ್ಷಕ್ಕೆ ಮುಜುಗರ ಆಗಬಾರದು ಎಂದು ನೈತಿಕತೆ ಗಮನದಲ್ಲಿಟ್ಟುಕೊಂಡು ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರುತ್ತೆ. ಇದು ಕಾಂಗ್ರೆಸ್ನ ಪಿತೂರಿ ಎಂದು ಹೇಳಿದರು.
ಕೆ. ಎಸ್.ಈಶ್ವರಪ್ಪ ಅವರು ಸಾರಿ, ಸಾರಿ ಹೇಳುತ್ತಿದ್ದಾರೆ. ನನ್ನಿಂದ ಯಾವುದೇ ಕಾಮಗಾರಿ ಮಂಜೂರಾಗಿಲ್ಲ ಎಂದು. ಆದರೂ, ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಅರ್ಥ ಆಗುತ್ತಿಲ್ಲ ಎಂದರು. ಮುಂದೆ ಎಲೆಕ್ಷನ್ ಬರುತ್ತಿದೆ. ಇದು ಒಂದು ಷಡ್ಯಂತ್ರ. ಅಲ್ಪಸಂಖ್ಯಾತರ ಒಲೈಕೆಗೆ ಒಳಗೊಂಡು ಅತಂತ್ರ ಆಗಿದ್ದರೂ ಈ ವಿಷಯ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇನ್ನೂ ಹತ್ತು ವರ್ಷಗಳ ಕಾಲ ಹೀಗೆ ಹೋರಾಟ ಮಾಡುತ್ತಲೇ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.