ಕರ್ನಾಟಕ

karnataka

ETV Bharat / state

ಜು.18ರ ಬಳಿಕ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾದರೆ ಅಚ್ಚರಿ ಇಲ್ಲ: ಆಯನೂರು ಮಂಜುನಾಥ್ - ಜೆಡಿಎಸ್ ಜೊತೆ ಮೈತ್ರಿ ವರಿಷ್ಠರಿಗೆ ಬಿಟ್ಟಿದ್ದು

ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ayanur-manjunath-says-surprisingly-kumaraswamy-himself-becomes-the-leader-of-the-opposition
ಜು.18ರ ಬಳಿಕ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾದರೆ ಅಚ್ಚರಿ ಇಲ್ಲ: ಆಯನೂರು ಮಂಜುನಾಥ್

By

Published : Jul 16, 2023, 4:31 PM IST

Updated : Jul 16, 2023, 5:40 PM IST

ಆಯನೂರು ಮಂಜುನಾಥ್

ಶಿವಮೊಗ್ಗ:ರಾಜ್ಯದಲ್ಲಿ ಹೊಸ ಹೊಸ ತರಹದ ಬೆಳೆವಣಿಗೆಗಳು ಆಗುತ್ತಿವೆ. ಜುಲೈ 18ರ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾದರೆ ಅಚ್ಚರಿ ಇಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನೂತನ ಉಪ ನಾಯಕಿಯಾಗಿ ಆಯ್ಕೆಯಾಗಿರುವ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯಕ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಮಾರಸ್ವಾಮಿಯವರಿಗೆ ಪಕ್ಕದಲ್ಲೇ ಕುಳಿತು ಮಾಹಿತಿಯನ್ನು ಒದಗಿಸುತ್ತ, ಶಾರದಾ ಪೂರ್ಯ ನಾಯಕ್ ಕೆಲಸ ಮಾಡುವುದನ್ನು ನಾವು ಟಿವಿಯಲ್ಲಿ ನೋಡಿದ್ದೀವಿ. ಈಗ ಅವರು ಗ್ರಾಮಾಂತರ ಕ್ಷೇತ್ರದ ಶಾಸಕಿಯಲ್ಲ, ಪಕ್ಷದ ರಾಜ್ಯದ ಜವಾಬ್ದಾರಿ ಅವರ ಮೇಲೆ ಇದೆ. ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿಯಿಂದ ಪಕ್ಷದ ಕಾರ್ಯಕರ್ತರು ಆಗಮಿಸಿದ್ದಾರೆ. ಅವರೆಲ್ಲರಿಗೂ ನೀವು ಏಕಮಾತ್ರ ಶಾಸಕಿಯಾಗಿದ್ದೀರಾ. ಈಗ ಪಕ್ಷದ ಉಪನಾಯಕಿಯಾಗಿ ಜಿಲ್ಲೆಯ ಪ್ರವಾಸವನ್ನು ಮಾಡಬೇಕು ಎಂದು ಜೆಡಿಎಸ್​ ಪಕ್ಷದ ನೂತನ ಉಪನಾಯಕಿ ಶಾರದಾ ಪೂರ್ಯ ನಾಯಕ್​ ಅವರಿಗೆ ಆಯನೂರು ಮಂಜುನಾಥ್ ಕಿವಿಮಾತು ಹೇಳಿದರು.

ಶಿವಮೊಗ್ಗ ಹೆಡ್​ಕ್ವಾಟರ್​ನಲ್ಲಿ ಏನಾದರೂ ಕೆಲಸ ಆಗಬೇಕು ಎಂದರೆ, ಅಲ್ಲಿ ನಮ್ಮ ಶಾಸಕಿ ಇದ್ದಾರೆ. ಅವರ ಬಳಿ ಹೋಗೋಣ ಎಂದು ಜಿಲ್ಲೆಯ ಎಲ್ಲ ತಾಲೂಕಿನವರಿಗೂ ಅನ್ನಿಸಬೇಕು. ಹಾಗಾಗಿ ನಿಮಗೆ ಹೊರೆ ಜಾಸ್ತಿ. ಇವು ಈಗ ಜಿಲ್ಲೆಯ ಪ್ರವಾಸ ಮಾಡಿದರೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬರುತ್ತದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಆತ್ಮವಿಶ್ವಾಸ ಬರುತ್ತದೆ. ಅಧಿಕಾರಿಗಳೂ ಕೂಡ ನಮ್ಮ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಕಾರ್ಯಕರ್ತರನ್ನು ನೆಗ್ಲೆಟ್​ ಮಾಡಿದ್ರೆ, ಶಿವಮೊಗ್ಗದಿಂದ ಶಾಸಕಿ ಬರುತ್ತಾರೆ ಅಥವಾ ಫೋನ್​ ಮಾಡಿ ಕೇಳುತ್ತಾರೆ ಎಂಬ ವಾತಾವರಣ ಸೃಷ್ಟಿಯಾಗಬೇಕು ಎಂದು ಸಲಹೆ ನೀಡಿದರು.

ಹೇಗೆ ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೋ ಹಾಗೆ ಶಿವಮೊಗ್ಗ ಜಿಲ್ಲೆಯಲ್ಲಿ ನೀವು ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಬೇಕಿದೆ. ನಿಮ್ಮ ಹಿಂದೆ ನಾವಿದ್ದೇವೆ, ಪಕ್ಷದ ಆಸ್ತಿತ್ವವನ್ನು ಕಾಪಾಡಿಕೊಳ್ಳುವುದಕೋಸ್ಕರ ಹೋರಾಡುತ್ತಿರುವ ಕಾರ್ಯಕರ್ತರ ರಕ್ಷಣೆಗೋಸ್ಕರ ನಾವು ಪ್ರಥಮ ಆದ್ಯತೆಯನ್ನು ಕೊಟ್ಟು ಅವರ ರಕ್ಷಣೆಯನ್ನು ಮಾಡಬೇಕು ಎಂದರು. ಈ ವೇಳೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಶ್ರೀಕಾಂತ್, ಮಾಜಿ ಶಾಸಕ ಪ್ರಸನ್ನ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಜೆಡಿಎಸ್ ಜೊತೆ ಮೈತ್ರಿ ವರಿಷ್ಠರಿಗೆ ಬಿಟ್ಟಿದ್ದು - ಬೊಮ್ಮಾಯಿ:ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ಮಾತನಾಡಿ, ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ಅದು ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡರ ನಡುವೆ ಇರುವ ಮಾತುಕತೆ. ಈಗಾಗಲೇ ಕುಮಾರಸ್ವಾಮಿಯವರು ಕೆಲವೊಂದಿಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆಗಳ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಸೇನಾಪತಿಯಿಲ್ಲದೇ ಯುದ್ಧಕ್ಕೆ ಬಂದ ಸ್ಥಿತಿ.. ಪ್ರತಿಪಕ್ಷ ನಾಯಕರಿಲ್ಲದೆ ಉಭಯ ಸದನದಲ್ಲಿ ಆಡಳಿತ ಪಕ್ಷವನ್ನು ಎದುರಿಸಲು ಬಿಜೆಪಿ ಸರ್ಕಸ್

Last Updated : Jul 16, 2023, 5:40 PM IST

ABOUT THE AUTHOR

...view details