ಶಿವಮೊಗ್ಗ: ಮಗನ ಭವಿಷ್ಯಕ್ಕಾಗಿ ಕೆ.ಎಸ್.ಈಶ್ವರಪ್ಪ ಅವರೇ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪನವರನ್ನು ಸೋಲಿಸುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಸ್ಪೋಟಕ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆದ್ದರೆ ಈಶ್ವರಪ್ಪ ಅವರ ಮಗನ ಭವಿಷ್ಯಕ್ಕೆ ಕುತ್ತು ಉಂಟಾಗುತ್ತದೆ. ಹಾಗಾಗಿ ಅವರೇ ತಮ್ಮ ಮಗನ ಭವಿಷ್ಯಕ್ಕಾಗಿ ಈ ಚುನಾವಣೆಯಲ್ಲಿ ಸೋಲಿಸುತ್ತಾರೆ. ಯಾವುದೇ ಅನುಮಾನ ಬೇಡ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಈಶ್ವರಪ್ಪ ಅಪ್ಪಟ ಶಿಷ್ಯ:ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಈಶ್ವರಪ್ಪ ಅವರಂತೆಯೇ ಅವರ ಕಾರ್ಬನ್ ಕಾಪಿ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ಈಶ್ವರಪ್ಪ ಅವರ ಅಪ್ಪಟ ಶಿಷ್ಯ. ಹಾಗಾಗಿ ಅವರಿಗೆ ಟಿಕೆಟ್ ಸಿಕ್ಕಿರಬಹುದು. ಇಡೀ ಮಹಾನಗರ ಪಾಲಿಕೆ ಗೆಲ್ಲುವ ಸಾಮರ್ಥ್ಯ ಇರುವ ಬಿಜೆಪಿಗೆ ಈಶ್ವರಪ್ಪ ಅವರ ಮನೆ ಇರುವ ವಾರ್ಡ್ನಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ಪಾಲಿಕೆ ಸದಸ್ಯರಾಗುತ್ತಾರೆ ಅಂದರೆ ನೀವೇ ಯೋಚಿಸಿ ಎಂದರು.
ಇದನ್ನೂ ಓದಿ:ನಿಯಂತ್ರಣವಿಲ್ಲದ ಮಾತು, ಪುತ್ರ ವ್ಯಾಮೋಹದಿಂದಾಗಿ ಈಶ್ವರಪ್ಪ ಚುನಾವಣೆಯಿಂದ ಔಟ್: ಆಯನೂರು ಮಂಜುನಾಥ್
ನಮಗೆ ಯಾರು ಪ್ರತಿಸ್ಪರ್ಧಿ ಇಲ್ಲ. ಸಮೀಪದ ಸ್ಪರ್ಧಿ ಇದ್ದಾರೆ. ಪ್ರತಿಸ್ಪರ್ಧಿ ಎಂದರೆ ನಮ್ಮ ಮುಂದೆ ಇರ್ತಾರೆ. ಸಮೀಪ ಅಂದರೆ ನಮ್ಮ ಹಿಂದೆ ಇರ್ತಾರೆ. ಹಾಗಾಗಿ ನಮಗೆ ಪ್ರತಿಸ್ಪರ್ಧಿ ಇಲ್ಲ ಎಂದರು. ಈ ಬಾರಿ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲ್ಲುತ್ತೇವೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್ ಗೆಲ್ಲುತ್ತದೆ. ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.