ಶಿವಮೊಗ್ಗ:ತುತ್ತೂರಿ ಊದುವವರಿಗೆ ಬೆಲೆ ಕೊಡುವ ಅಗತ್ಯವಿಲ್ಲ. ನಾಯಕತ್ವ ಬದಲಾವಣೆ ಕುರಿತು ಪಕ್ಷ ಏನು ಹೇಳಬೇಕೋ ಹೇಳಿದೆ, ಶಾಸಕರು ಏನು ಹೇಳಬೇಕೋ ಹೇಳಿದ್ದಾರೆ, ಆದರೂ ಕೆಲವರ ಕೈಯಲ್ಲಿ ತುತ್ತೂರಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ.
ಯತ್ನಾಳ್ ವಿರುದ್ಧ ಆಯನೂರು ಮಂಜುನಾಥ್ ಕಿಡಿ ಕೆಲವರು ತಮ್ಮ ಇರುವಿಕೆಗಾಗಿ ಕುಹಕ ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರೆ ಅವರ ಮಾತುಗಳಿಗೆ ಮಹತ್ವ ಬಂದಂತೆ ಆಗಲಿದೆ ಎಂದರು.
ಬಿಜೆಪಿ ಪಕ್ಷದಲ್ಲಿ ಒಂದು ಕಾನೂನು, ಸಂವಿಧಾನ ಇದೆ. ಅದರನ್ವಯ ನೋಟಿಸ್ ನೀಡಿದ್ದಾರೆ. ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತಾರೆ. ಕೆಲವರು ತಮ್ಮನ್ನು ತಾವು ಶಕ್ತಿಶಾಲಿಗಳು ಎನ್ನುವ ಆತ್ಮರತಿ ಕಾಯಿಲೆಗೆ ಒಳಗಾಗಿದ್ದಾರೆ. ಅವರಿಗೆ ಎಲ್ಲಿ ಚಿಕಿತ್ಸೆ ಕೊಡಿಸಬೇಕೋ ಅಲ್ಲಿ ಕೊಡಿಸಬೇಕು. ಹಾಗಾಗಿ ಹೆಚ್ಚು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಯತ್ನಾಳ್ ಅವರ ಮೇಲೆ ಪಕ್ಷ ಖಂಡಿತವಾಗಿ ಕ್ರಮ ಕೈಗೊಳ್ಳುತ್ತದೇ ಯಾವುದೇ ಸಂಶಯ ಇಲ್ಲಾ ಎಂದರು.
ಓದಿ:ರಾಜ್ಯದ ಎಷ್ಟು ಜನರಿಗೆ ಸಚಿವ ಸ್ಥಾನ ನೀಡ್ತಾರೆ ಗೊತ್ತಿಲ್ಲ: ಬಿ.ವೈ.ರಾಘವೇಂದ್ರ