ಶಿವಮೊಗ್ಗ: ಆರ್ಟಿಒ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಅಣ್ಣಾ ಹಜಾರೆ ಹೋರಾಟ ಸಮಿತಿಯವರು ಆರ್ಟಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ನಗರದಲ್ಲಿ ಕಚೇರಿ ಇದ್ದರು ಸಹ ಸ್ಥಳಾವಕಾಶದ ನೆಪದಲ್ಲಿ ಕಚೇರಿಯ ಕೆಲಸಗಳನ್ನು ನಗರದ ಹೊರವಲಯದ ಮಲವಗೊಪ್ಪಕ್ಕೆ ವರ್ಗಾವಣೆ ಮಾಡಿ ಸಾರ್ವಜನಿಕರಿಗೆ ಅನಾನುಕೂಲವಾಗುವಂತೆ ಮಾಡಲಾಗಿದೆ. ಶಿವಮೊಗ್ಗ ನಗರದ ಕಚೇರಿಯಲ್ಲಿ ಚಲನ್ ತೆಗೆದುಕೊಂಡು ಮಲವಗೊಪ್ಪಕ್ಕೆ ಹೋಗಬೇಕಾಗಾದ ಅನಿವಾರ್ಯತೆಯನ್ನು ಇಲಾಖೆ ತಂದಿದೆ. ಇನ್ನು ಸಾರ್ವಜನಿಕರ ಅನುಕೂಲಕ್ಕೆ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ನೇಮಕ ಮಾಡಬೇಕು ಎಂಬ ನಿಯಮ ಇದ್ದರು ಸಹ ಅದನ್ನು ಇಲ್ಲಿನ ಅಧಿಕಾರಿಗಳು ಗಾಳಿಗೆ ತೋರಿದ್ದಾರೆ ಎಂದು ದೂರಿದರು.