ಶಿವಮೊಗ್ಗ:ಎಟಿಎಂ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು ಮತ್ತು ಸರಗಳ್ಳತನ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರದಲ್ಲಿ ಸರಗಳ್ಳರ, ಎಟಿಎಂನ ಹಣ ದೋಚಿದ ಆರೋಪಿಗಳ ಬಂಧನ
ಎಟಿಎಂನಲ್ಲಿನ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿ ಜಯರಾಮ ಮತ್ತು ಆವಿನಹಳ್ಳಿ ಬಳಿ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸಾಗರ ಪೋಲಿಸ್
ಸಾಗರದ ಮಾಸೂರಿನ ಎಟಿಎಂ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿ ಜಯರಾಮ ಎಂಬುವನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಬೈಕ್, ಕಟ್ಟರ್ ಯಂತ್ರ ಹಾಗೂ ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಆವಿನಹಳ್ಳಿ ಬಳಿ ಚಿನ್ನದ ಸರ ಅಪಹರಿಸಿದ್ದ ಇಬ್ಬರನ್ನು ಸಹ ಬಂಧಿಸಿದ್ದಾರೆ. ಮನೆಘಟ್ಟದ ಪವನ, ಬಿಳಿಸಿರಿಯ ಮಂಜಪ್ಪ ಬಂಧಿತ ಆರೋಪಿಗಳಾಗಿದ್ದು, ಆಪಾದಿತರಿಂದ 45 ಗ್ರಾಂ. ಚಿನ್ನದ ಸರ ವಶಕ್ಕೆ ಪಡೆದು ಕೊಳ್ಳಲಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.