ಶಿವಮೊಗ್ಗ:ವಿಚಾರಣೆಗೆಂದು ಕರೆ ತಂದಿದ್ದ ಸಹೋದರರಿಬ್ಬರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊಸನಗರದ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಿಎಸ್ಐ ನಾಗರಾಜ್ ಹಾಗೂ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆ ಪ್ರಕರಣವೊಂದರ ಸಂಬಂಧ ಭಾನುವಾರ ರಾತ್ರಿ 9 ಗಂಟೆಗೆ ಹೊಸನಗರ ತಾಲೂಕಿನ ಮಕ್ಕಿಮನೆ ಬೇಳೂರು ರಾಮಚಂದ್ರ ಹಾಗೂ ಆತನ ಸಹೋದರ ಕೃಷ್ಣಮೂರ್ತಿಯನ್ನು ಠಾಣೆಗೆ ಕರೆಯಿಸಲಾಗಿತ್ತು. ಈ ಸಹೋದರರನ್ನು ಹರೀಶ್ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕರೆಯಿಸಲಾಗಿತ್ತು. ವಿಚಾರಣೆ ನಡೆಯುವ ವೇಳೆ ಸಹೋದರರಿಬ್ಬರು ಕರ್ತವ್ಯನಿರತರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.