ಶಿವಮೊಗ್ಗ:ಹರ್ಷ ಕೊಲೆಗಡುಕರಿಗೆ ಗಲ್ಲು ಶಿಕ್ಷೆಯಾಗಬೇಕು. ಇಲ್ಲವೇ ಅವರೆಲ್ಲರನ್ನೂ ಎನ್‌ಕೌಂಟರ್ ಮಾಡಿ ಸಾಯಿಸಬೇಕು ಮತ್ತು ಹಿಂದೂ ಯುವಕರ ಹತ್ಯೆಗಳು ಇಂದಿಗೆ ಕೊನೆಯಾಗಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಹತ್ಯೆಯಾದ ಹಿಂದೂ ಯುವಕ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾಡನಾಡಿದರು. ನಗರದಲ್ಲಿ ನಡೆದ ಹರ್ಷ ಹತ್ಯೆ ಅತ್ಯಂತ ನೋವಿನ ಮತ್ತು ರೋಷದ ಘಟನೆಯಾಗಿದೆ. ಶಿವಮೊಗ್ಗದಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಹಿಂದೂಗಳ ರಕ್ತ ಕುದಿಯುತ್ತಿದೆ. ಇಂತಹ ದುರ್ಘಟನೆ ನಡೆಯಬಾರದಿತ್ತು. ಇಲ್ಲಿಗೆ ಇಂತಹ ಘಟನೆಗಳು ಅಂತ್ಯವಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ರಾಜ್ಯದಲ್ಲಿ ನಡೆದ ಹಿಂದೂ ಯುವಕರ ಹತ್ಯೆಗೆ ಸಂಬಂಧಿಸಿದಂತೆ ಅರೋಪಿಗಳಿಗೆ ಜಾಮೀನು ಸಿಕ್ಕು ಹೊರಗೆ ಬರುತ್ತಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಹೀಗಾಗಬಾರದು. ಹರ್ಷ ಹತ್ಯೆ ಆರೋಪಿಗಳು ಯಾವುದೇ ಕಾರಣಕ್ಕೂ ಜಾಮೀನು ಪಡೆದುಕೊಂಡು ಹೊರಬರಬಾರದು. ಅವರ ವಿರುದ್ಧ ಪೊಲೀಸರು ಕಠಿಣ ಕಾಯ್ದೆಗಳನ್ನು ಹಾಕಬೇಕು.
ಕೋಕಾ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಬೇಕು. ಇದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಒಂದು ವರ್ಷದೊಳಗೆ ತೀರ್ಪು ಬಂದು ಅವರಿಗೆ ಗಲ್ಲು ಶಿಕ್ಷಯಾಗಬೇಕು. ಹೀಗಾಗದಿದ್ದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.