ಶಿವಮೊಗ್ಗ:ಸ್ವಂತ ಮನೆ ಹೊಂದುವ ಕಡು ಬಡವರ ಪಾಲಿನ ಆಶಾ ಕಿರಣ ಆಶ್ರಯ ಸಮಿತಿ. ಇಂತಹ ಆಶ್ರಯ ಸಮಿತಿಗೆ ಸಭೆ ನಡೆಸಲು, ಫಲಾನುಭವಿಗಳಿಗೆ ಸಂಪರ್ಕ ಒದಗಿಸುವ ಆಶ್ರಯ ಸಮಿತಿ ಕಚೇರಿಯನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.
ಶಿವಮೊಗ್ಗ ನೆಹರು ರಸ್ತೆಯ ಪಾಲಿಕೆಯ ಸುಭಾಷ್ ಚಂದ್ರ ಬೋಸ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಕಚೇರಿಯನ್ನು ಈಶ್ವರಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಆಶ್ರಯ ಸಮಿತಿ ಕಚೇರಿ ಉದ್ಘಾಟನೆ ಶಿವಮೊಗ್ಗ ಆಶ್ರಯ ಸಮಿತಿಗೆ ಇದುವರೆಗೂ ಒಂದು ಖಾಯಂ ಕಚೇರಿ ಇರಲಿಲ್ಲ. ಇದರಿಂದ ಕಚೇರಿಗಾಗಿ ಸೂಕ್ತ ಜಾಗದ ಹುಡುಕಾಟ ನಡೆಸಿ, ಕಚೇರಿ ಪ್ರಾರಂಭ ಮಾಡಲಾಗಿದೆ. ಕಡು ಬಡವರಿಗೆ ಸ್ವಂತ ಸೂರು ನೀಡುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಭೂಮಿ ಖರೀದಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ ಹಣದಲ್ಲಿ ಮನೆ ನಿರ್ಮಾಣ ಮಾಡಿ ಕೊಡುವ ಯೋಜನೆ ಇದಾಗಿದೆ.
ಆಶ್ರಯ ಸಮಿತಿ ಕಚೇರಿ ಉದ್ಘಾಟನೆ ಈಗಾಗಲೇ 2.705 ಜನ ಫಲಾನುಭವಿಗಳು ಮನೆಗಳಿಗೆ ಹಣ ಕಟ್ಟಿದ್ದಾರೆ. ಸಾಮಾನ್ಯ ವರ್ಗದವರಿಗ 80 ಸಾವಿರ, ಎಸ್ಸಿ/ಎಸ್ಟಿಯವರಿಗೆ 50 ಸಾವಿರ ರೂ ನಿಗದಿ ಮಾಡಲಾಗಿದೆ. ಈಗ ಕಾಮಗಾರಿ ಪ್ರಾರಂಭವಾಗಿದೆ. ಕಾಮಗಾರಿಯನ್ನು ಬೇಗ ಪ್ರಾರಂಭಿಸಿ ಎಂದು ಆಯುಕ್ತ ಚಿದಾನಂದ ವಾಟರೆ ಅವರಿಗೆ ಸಚಿವರು ಸೂಚನೆ ನೀಡಿದರು.
ಮನೆ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಅಡ್ಡಿ ಬಂದರೆ, ಅದನ್ನು ಸರ್ಕಾರ ನಿವಾರಣೆ ಮಾಡುತ್ತದೆ. ಆಶ್ರಯ ಕಚೇರಿಯು ಕಡು ಬಡವರಿಗೆ ಹಾಗೂ ಸಮಿತಿಯವರಿಗೆ ಕೊಂಡಿಯಾಗಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.