ಶಿವಮೊಗ್ಗ:ಬಾರ್ವೊಂದರ ಮೇಲಿನ ಬೋರ್ಡ್ ಬರೆಯಲು ಬಂದಿದ್ದ ಕಲಾವಿದ ಹೈಟೆನ್ಷನ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಹಾರನಹಳ್ಳಿಯಿಂದ ಸವಳಂಗಕ್ಕೆ ತೆರಳುವ ಮಾರ್ಗದಲ್ಲಿರುವ ಭರತ್ ಬಾರ್ನಲ್ಲಿ ಬೋರ್ಡ್ ಬರೆಯಲು ಬಂದಿದ್ದ ಮಾಲತೇಶ್ (38) ಎಂಬಾತ ಮೃತಪಟ್ಟಿದ್ದಾರೆ. ಮಾಲತೇಶ್ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದವರು ಎಂದು ತಿಳಿದುಬಂದಿದೆ.
ಮಾಲೀಕ ತಿಪ್ಪೇಸ್ವಾಮಿ ಎಂಬುವರು ಕರೆಯಿಸಿ ಬೋರ್ಡ್ ಬರೆಯಲು ಹೇಳಿದ್ದರಂತೆ. ಆದರೆ ಹೈಟೆನ್ಷನ್ ತಂತಿ ತಗಲು ಮಾಲತೇಶ್ ಸಾವನ್ನಪ್ಪಿದ್ದಾರೆ. ಹೈಟೆನ್ಷನ್ ತಂತಿ ಹಾದು ಹೋಗುವ ಕೆಳಗಡೆ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೂ ನಿಯಮ ಮೀರಿ ಕಟ್ಟಡ ಕಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿದೆ.