ಕರ್ನಾಟಕ

karnataka

ETV Bharat / state

ಮಹಿಳೆಯ ಟಿಕ್​ಟಾಕ್​ ವಿಡಿಯೋಗೆ ಅಶ್ಲೀಲ ಆಡಿಯೋ ಸೇರಿಸಿ ಪೋಸ್ಟ್​ ಮಾಡುತ್ತಿದ್ದ ವ್ಯಕ್ತಿ ಸೆರೆ - ನಕಲಿ ಟಿಕ್​ಟಾಕ್​ ಕ್ರೈಂ ನ್ಯೂಸ್​

ನಕಲಿ ಟಿಕ್​ ಟಾಕ್ ಖಾತೆಯನ್ನು ತೆರೆದು ಮಹಿಳೆಯ ವೀಡಿಯೋವನ್ನು ಅಶ್ಲೀಲವಾಗಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡುತ್ತಿದ್ದ ಆರೋಪಿ ಯನ್ನು ಬಂಧಿಸಿದ್ದಾರೆ

ಆರೋಪಿ ಸಂಜಯ್

By

Published : Oct 12, 2019, 3:30 PM IST

ಶಿವಮೊಗ್ಗ:ನಕಲಿ ಟಿಕ್​ ಟಾಕ್ ಖಾತೆಯನ್ನು ತೆರೆದು ಮಹಿಳೆಯ ವೀಡಿಯೋವನ್ನು ಅಶ್ಲೀಲವಾಗಿ ವಾಯ್ಸ್​ ಎಡಿಟ್ ಮಾಡಿ ಟಿಕ್​ಟಾಕ್​​ನಲ್ಲಿ ಅಪ್​ಲೋಡ್ ಮಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸಿ.ಇ.ಎನ್ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಭದ್ರಾವತಿ ತಾಲೂಕು ಮಲ್ಲಿಗೇನ ಹಳ್ಳಿಯ ವಾಸಿಯಾದ ಸಂಜಯ್ (32) ಈತ ಕುವೆಂಪು ವಿಶ್ವ ವಿದ್ಯಾನಿಲಯದ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳಿಗೆ ಹಾಡು ಕಲಿಸುವಾಗ ವಿಡಿಯೋ ಮಾಡಿಕೊಂಡು ಅದಕ್ಕೆ ಟಿಕ್​ಟಾಕ್​ ಮೂಲಕ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡುತ್ತಿದ್ದ. ಈತನ ಕುರಿತು ಮಹಿಳೆಯು ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಕೈ ಗೊಂಡ ಸಿಇಎನ್ ಇನ್ಸ್ಪೆಕ್ಟರ್ ಗುರುರಾಜ್ ಕರ್ಕಿರವರು ಆರೋಪಿ ಸಂಜಯ್​ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಈತ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದನು. ಇನ್ನು ಎ.ಎಸ್.ಐ. ಮಂಜುನಾಥ್, ರಾಹತ್ ಅಲಿ, ಕೃಷ್ಣಮೂರ್ತಿ ಹಾಗೂ ಸಿ ಹೆಚ್.ಸಿ ಗಳಾದ ನರಸಿಂಹಮೂರ್ತಿ, ನಾಗರಾಜ್, ಜಗದೀಶ್, ವಿಠೋಬರಾವ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details