ಕರ್ನಾಟಕ

karnataka

ETV Bharat / state

ಹೋರಾಟಗಾರ ಪುಣಜೆ ಗಿರೀಶ್ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ: ಎಸ್​​​.ಆರ್.ಹಿರೇಮಠ ಆಗ್ರಹ

ಜಿಲ್ಲೆಯಲ್ಲಿ 2017ರಲ್ಲಿ ಮಾಡಲಾಗಿರುವ ಅರಣ್ಯ ಭೂಮಿ ಡಿನೋಟಿಫಿಕೇಶನ್ ಸಂಬಂಧ ಗಿರೀಶ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಈ ಡಿನೋಟಿಫಿಕೇಷನ್ ಕೇಂದ್ರದ ಅನುಮತಿ ಇಲ್ಲದೆ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಹೋರಾಟ ಮಾಡಿಕೊಂಡು ಬಂದಿರುವ ಇವರ ಮೇಲೆ ಈಗ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

SR Hiremath
ಜನಸಂಗ್ರಾಮ ಪರಿಷತ್‌ನ ಮುಖ್ಯಸ್ಥ ಎಸ್.ಆರ್. ಹಿರೇಮಠ್

By

Published : Mar 13, 2021, 9:35 PM IST

ಶಿವಮೊಗ್ಗ:ಅರಣ್ಯ ನಾಶ, ಅಕ್ರಮ ಗಣಿಗಾರಿಕೆ ಹಾಗೂ ಡಿನೋಟಿಫಿಕೇಶನ್ ವಿರುದ್ಧ ಹೋರಾಟ ನಡೆಸುತ್ತಿರುವ ಜನಸಂಗ್ರಾಮ ಪರಿಷತ್ತಿನ ಸದಸ್ಯ ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಗಿರೀಶ್ ಆಚಾರ್ಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಹಲ್ಲೆಗೊಳಗಾಗಿರುವ ಗಿರೀಶ್‌ಗೆ ರಕ್ಷಣೆ ನೀಡುವಂತೆ ಜನಸಂಗ್ರಾಮ ಪರಿಷತ್‌ನ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 8ರಂದು ಕೆಲಸದ ನಿಮಿತ್ತ ಬೈಂದೂರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಗಿರೀಶ್ ಆಚಾರ್ಯ ಅವರನ್ನು ನಗರ ಬಳಿ ಅಪರಿಚಿತರು ತಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಅವರಿಗೆ ಹಿಂಸೆ ನೀಡಲಾಗಿದೆ. ಈ ಸಂದರ್ಭದಲ್ಲಿ ಬಂದ ಪೊಲೀಸ್ ಜೀಪ್‌ನಲ್ಲಿ ಗಿರೀಶ್ ಆಚಾರ್ಯರನ್ನು ಠಾಣೆಗೆ ಕರೆದುಕೊಂಡು ಹೋಗಿ ಮಹಿಳಾ ದೌರ್ಜನ್ಯದ ಸುಳ್ಳು ಕೇಸು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿದರು.

ಜನಸಂಗ್ರಾಮ ಪರಿಷತ್‌ನ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಸುದ್ದಿಗೋಷ್ಠಿ

ಅಕ್ರಮ ಮರಳುಗಾರಿಕೆ, ಟಿಂಬರ್ ಮಾಫಿಯಾ, ಕಲ್ಲು ಗಣಿಗಾರಿಕೆ ಮೊದಲಾದವುಗಳ ವಿರುದ್ಧ ಗಿರೀಶ್ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಇವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ 2017ರಲ್ಲಿ ಮಾಡಲಾಗಿರುವ ಅರಣ್ಯ ಭೂಮಿ ಡಿನೋಟಿಫಿಕೇಶನ್ ಸಂಬಂಧ ಗಿರೀಶ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಈ ಡಿನೋಟಿಫಿಕೇಷನ್ ಕೇಂದ್ರದ ಅನುಮತಿ ಇಲ್ಲದೆ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಹೋರಾಟ ಮಾಡಿಕೊಂಡು ಬಂದಿರುವ ಇವರ ಮೇಲೆ ಈಗ ಹಲ್ಲೆ ಮಾಡಲಾಗಿದೆ. ಈ ಹಿಂದೆಯೂ ಮೂರು ಬಾರಿ ಹಲ್ಲೆ ನಡೆಸಲಾಗಿದೆ ಎಂದರು. ಈ ಹಲ್ಲೆಯ ಹಿಂದೆ ಹಿಂದೆ ಸಿಪಿಐ ಕೈವಾಡ ಇರುವುದು ಕೂಡ ಸ್ಪಷ್ಟವಾಗಿದೆ. ಸಿಸಿಟಿವಿ ಕ್ಯಾಮರಾದ ದೃಶ್ಯ ತೆಗೆದು ಅದನ್ನು ಸಾಕ್ಷ್ಯವಾಗಿ ಪರಿಗಣಿಸಬೇಕು. ಹಲ್ಲೆ ನಡೆಸಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಅಗ್ರಹಿಸಿದರು.

ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿ

ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅರಣ್ಯದಲ್ಲಿ ಭೂಮಿ ತೋರಿಸಿ ಇದುವರೆಗೂ ನಿಖರ ದಾಖಲೆಗಳನ್ನು ನೀಡಿಲ್ಲ. ಈಗ ದಾಖಲೆಗಳಿಲ್ಲದಿದ್ದರೂ ಒಂದೊಂದೇ ಕುಟುಂಬಗಳಿಗೆ ಹೆಚ್ಚಿನ ಭೂಮಿ ನೀಡಿ ಮತ್ತೊಂದು ಲೋಪವೆಸಗುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.

ಈ ಹಿಂದೆ ನೀಡಿರುವ ದಾಖಲೆಗಳ ಪ್ರಕಾರ ಭೂಮಿ ಡಿನೋಟಿಫಿಕೇಶನ್ ಮಾಡಿ ಸಂತ್ರಸ್ತರಿಗೆ ನ್ಯಾಯ ಕೊಡುವ ಕೆಲಸ ಆಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಗಣಿಗಾರಿಕೆ, ರೆಸಾರ್ಟ್ ನಿರ್ಮಾಣ, ಟಿಂಬರ್ ಮಾಫಿಯಾಕ್ಕೆ ಭೂಮಿ ನೀಡಬಾರದು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಮಹಿಳೆಯ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಡಾ. ತೇಜಸ್ವಿನಿ ಅನಂತಕುಮಾರ್

ABOUT THE AUTHOR

...view details