ಶಿವಮೊಗ್ಗ:ಯಾರೂ ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕದ್ದಿದ್ದ ಇಬ್ಬರು ಮನೆಗಳ್ಳರನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಕಟ್ಟೆ ನಿವಾಸಿ ಮಹಮ್ಮದ್ ಶಾಬಾಜ್ (19) ಟಿಪ್ಪು ನಗರದ ನಿವಾಸಿ ಆದಿಲ್ (20) ಬಂಧಿತ ಆರೋಪಿಗಳು. ಇವರು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಯ್ಯ ಲೇಔಟ್ನ ಶಿಕ್ಷಣ ಇಲಾಖೆಯ ಪ್ರಭಾಕರ್ ಎಂಬುವರ ಮನೆಯಲ್ಲಿ 196 ಗ್ರಾಂ ತೂಕದ ಬಂಗಾರ ಹಾಗೂ 80 ಸಾವಿರ ರೂ. ನಗದು ಕಳ್ಳತನ ಮಾಡಿದ್ದರು.